'ಹೋರಾಟಕ್ಕೆ ಮತ್ತೊಂದು ಹೆಸರೇ ನೇತಾಜಿ ಸುಭಾಷ್ ಚಂದ್ರಬೋಸ್'
ಚನ್ನಪಟ್ಟಣ: ಧೈರ್ಯ, ಶೌರ್ಯ, ಹೋರಾಟಕ್ಕೆ ಮತ್ತೊಂದು ಹೆಸರು ಸುಭಾಷ್ ಚಂದ್ರಬೋಸ್ ಎಂದು ಬರಹಗಾರ ಶ್ರೀನಿವಾಸ ರಾಂಪುರ ಅಭಿಪ್ರಾಯಪಟ್ಟರು. ನಗರದ ನ್ಯಾಷನಲ್ ಕಂಪ್ಯೂಟರ್ ಸೆಂಟರ್ ಆವರಣದಲ್ಲಿ ಸಂಗೀತ ಸಾಂಸ್ಕೃತಿಕ ಟ್ರಸ್ಟ್ ಮತ್ತು ಸಿರಿ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆ, ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗುಲಾಮರಂತೆ ನೂರು ವರ್ಷ ಬದುಕುವುದಕ್ಕಿಂತ ಸ್ವತಂತ್ರ್ಯ ಜೀವಿಗಳಾಗಿ ಒಂದು ವರ್ಷ ಬದುಕುವುದೇ ಲೇಸು ಎಂದು ತಿಳಿದುಕೊಂಡಿದ್ದರು. ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ದೇಶದ ಉದ್ಧಗಲಕ್ಕೂ ಸಾರಿದ್ದರು ಎಂದು ತಿಳಿಸಿದರು. ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ತೋಟದಮನೆ ಕೃಷ್ಣೇಗೌಡ ಇದ್ದರು.
ತನಿಖೆಗೆ ಆದೇಶ ಬೀಳದ ಹೊರತು
ಕದಲುವುದಿಲ್ಲ: ಸಿದ್ದರಾಮ ಹೆಗಡೆ
ಚನ್ನಪಟ್ಟಣ: ಧರಣಿ ಕೈಬಿಡದಿದ್ದರೆ ನಿನ್ನ ಮಗನನ್ನು ಕೊಂಡು ಬಿಡುತ್ತೇನೆ ಎಂಬ ಬೆದರಿಕೆಯ ನಡುವೆಯೂ ಹೋರಾಡುತ್ತಿದ್ದೇನೆ, ನನ್ನ ಜತೆ ಖಾಲಿ ಮಾತುಕತೆ ಬೇಡ, ತನಿಖೆಗೆ ಆದೇಶ ಬೀಳದ ಹೊರತು ನಾನು ಇಲ್ಲಿಂದ ಕದಲುವುದಿಲ್ಲ. ಇದು ಮರಳು ಗಣಿಗಾರಿಕೆಯ ವಿರುದ್ಧ ಏಕಾಂಗಿ ಹೋರಾಟ ಆರಂಭಿಸಿರುವ ತಾಪಂ ಮಾಜಿ ಅಧ್ಯಕ್ಷ ಸಿದ್ದರಾಮ ಹೆಗಡೆ ಸ್ಪಷ್ಟೋಕ್ತಿ. ಶುಕ್ರವಾರ ಸಂಜೆ ಹೆಗಡೆಯೊಂದಿಗೆ ಮಾತುಕತೆಗೆ ಮುಂದಾದ ಉಪ ವಿಭಾಗಾಧಿಕಾರಿ ಸಿದ್ದಪ್ಪ ತಮ್ಮ ಆರೋಗ್ಯದ ದೃಷ್ಟಿಯಿಂದ ಚಳವಳಿ ಕೈಬಿಡಿ ಎಂದು ಮಾಡಿದ ಮನವಿಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ ಹೆಗಡೆ ಎಂತಹುದೇ ಬೆದರಿಕೆಗೂ ಬಗ್ಗಿಲ್ಲ ನಾನು, ನನ್ನ ಮಗ ಸತ್ತರೂ ಸರಿಯೇ ನ್ಯಾ ದೊರಕುವವರೆಗೆ ಚಳವಳಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು ಉಪವಿಭಾಗಾಧಿಕಾರಿ ಸಿದ್ದಪ್ಪ, ಈಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸುವುದಾಗಿ ತಿಳಿಸಿದರು.