ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪತ್ನಿಯ ಕತ್ತು ಕೊಯ್ದು ಕೊಲೆ

Rashmi Kasaragodu
Updated On : 27 Jan 2014, 1:46 am


ಮಾಗಡಿ: ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ತಾಲೂಕಿನ ದುಬ್ಬಗೊಟ್ಟಿಗೆ ಕಾಲೋನಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಶನಿವಾರ ರಾತ್ರಿ ಕೆಂಪಯ್ಯ ಕುಡಿದು ಬಂದು ಮನೆಯಲ್ಲಿ ಹೆಂಡತಿ ಯಲ್ಲಮ್ಮನೊಂದಿಗೆ ಜಗಳವಾಡಿಕೊಂಡು ಮಲಗಿದ್ದಾರೆ. ಹೆಂಡತಿ ಮತ್ತು ಮಗಳು ಮಲಗಿದ ನಂತರ ಕೆಂಪಯ್ಯ ಕುಡಿದ ಅಮಲಿನಲ್ಲಿ ಹೆಂಡತಿಯ ಕುತ್ತಿಗೆ ಕೊಯ್ದು, ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಳಿಗ್ಗೆ ಯಲ್ಲಮ್ಮನ  ಮಗಳು ಕುಸುಮ ಎದ್ದು ನೋಡಿದ್ದಾಳೆ. ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಚಿರಾಡಿದ್ದಾಳೆ. ಚಿರಾಟಕ್ಕೆ ಅಕ್ಕಪಕ್ಕದ ಮನೆಯವರು ಬಂದು ವಿಚಾರಿಸಿದಾಗ ರಾತ್ರಿ ನಡೆದ ಘಟನೆಯನ್ನು ಕುಸುಮ ವಿವರಿಸಿದ್ದಾಳೆ. ವಿಷಯ ತಿಳಿದ ಯಲ್ಲಮ್ಮನ ತಮ್ಮ ನರಸಿಂಹಮೂರ್ತಿ ಕೂಡಲೆ ಮಾಗಡಿ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement