ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂಬಿಗರ ಚೌಡಯ್ಯ ಜಯಂತಿ ಆಚರಣೆ

Rashmi Kasaragodu
Updated On : 28 Jan 2014, 1:33 am

ವಿಜಯಪುರ: ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನ ಕಾಲದಲ್ಲಿ ಅಂಬಿಗರ ಚೌಡಯ್ಯ ರಚಿಸಿದ ವಚನಗಳು ಸಮಾಜ ಪರಿವರ್ತನೆಗೆ ನಾಂದಿಯಾಗಿವೆ ಎಂದು ಪ್ರಗತಿ ಪ್ರಾಂಶುಪಾಲ ನಾಗರಾಜು ತಿಳಿಸಿದರು. ವಿಜಯಪುರ ಗಂಗಮ್ಮದೇವಿ ದೇವಾಲಯದ ಆವರಣದಲ್ಲಿ ಗಂಗಾಮತಸ್ಥರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  
ತಾಲೂಕು ಕಸಾಪ ಅಧ್ಯಕ್ಷ ಎನ್.ರಾಜ್ಗೋಪಾಲ್ ಮತ್ತಿತರರು ಮಾತನಾಡಿದರು.
ಬೆಂಗಳೂರು ಖಾದಿ ಗ್ರಾಮೋದ್ಯೋಗ ಉದ್ಯಮಿ ಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಎಂ.ಕೇಶವಪ್ಪ, ಎಸ್,ಭಾಸ್ಕರ್, ಮಾನಸ ಆಸ್ಪತ್ರೆಯ ಡಾ.ರಾಜೇಶ್, ಚಿ.ಮಾ.ಸುಧಾಕರ್, ಗಂಗಾಮತಸ್ಥರ ಸಂಘದ ಅಧ್ಯಕ್ಷ ಅರ್.ಆಂಠನಪ್ಪ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement