ರಂಗೋಲಿ ಸ್ಪರ್ಧೆ: ಪ್ರಿಯಾಂಕ ಪ್ರಥಮ
ದೇವನಹಳ್ಳಿ: ಇಲ್ಲಿನ ಸರೋವರ ಬೀದಿಯಲ್ಲಿರುವ ಅಣ್ಣಮ್ಮದೇ ಸೇವಾ ಸಮಿತಿ ಟ್ರಸ್ಟ್ ಶಕ್ತಿ ದೇವತೆಗಳಾದ ಅಣ್ಣಮಮ್ಮದೇವಿ, ಮಾರಮ್ಮದೇವಿ, ದೊಡ್ಡಮ್ಮದೇವಿ, ಪೂಜಮ್ಮದೇವಿ ಹಾಗೂ ಮುನೇಶ್ವರಸ್ವಾಮಿ ದೇವತೆಗಳ 3 ನೇ ವರ್ಷದ ಐದು ದಿನಗಳ ಜಾತ್ರ ಮಹೋತ್ಸವ ನಡೆಯುತ್ತಿದ್ದು ನಾಲ್ಕನೇ ದಿನವಾದ ಗುರುವಾರ ರಂಗೋಲಿ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಆಯೋಜಿಸಿದ್ದರು.
ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ವಿವಿಧ ಆಕೃತಿಗಳ ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು ಇವರಲ್ಲಿ ಕೆಲವರು ತರಕಾರಿಗಳನ್ನೇ ಬಳಸಿ ರಂಗೋಲಿ ರಚಿಸಿದ್ದು ವಿಶೇಷವಾಗಿತ್ತು, ಇಲ್ಲಿನ ಶಿಲ್ಪಕಲಾ ಶಾಲೆಯ ಶಿಲ್ಪಿ ಸರೋಜಾದೇವಿ ಆಚಾರ್ಯ, ಶಂಕರ ನಾರಾಯಣ್ ಹಾಗೂ ಶಾರಿಕಾ ಮಧುಸೂಧನ್ ತೀರ್ಪುಗಾರರಾಗಿ ಆಗಮಿಸಿ ಈ ರಂಗೋಲಿ ಕಲೆ ನಮ್ಮ ದೇಶದ ಪುರಾತನ ಸಂಸ್ಕೃತಿಯಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಜೀವಂತವಾಗಿದೆ ಇದನ್ನು ಮುಂದಿನ ಪೀಳಿಗೆಗಾಗಿ ಉಳಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿ ಅಲ್ಲದೆ ಮನೆಗಳಲ್ಲಿ ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ರಂಗೋಲಿ ಬಿಡಿಸುವಲ್ಲಿ ಆಸಕ್ತಿ ಮೂಡಿಸಬೇಕು ಎಂದರು.
ಈ ಸ್ಪರ್ಧೆಯಲ್ಲಿ ಪ್ರಿಯಾಂಕ- ಪ್ರಥಮಸ್ಥಾನ ಗಳಿಸಿ ಐದು ಸಾವಿರ ರು. ನಗದು ಪಡೆದಿದ್ದಾರೆ.
ಜ್ಯೋತಿ -ದ್ವಿತೀಯ ಸ್ಥಾನ ಮೂರು ಸಾವಿರ ರು. ವಿಜಯಲಕ್ಷ್ಮಿ -ತೃತೀಯ, ಯಶೋಧ - ನಾಲ್ಕನೇ ಸ್ಥಾನ ಹಾಗೂ ರಾಜೇಶ್ವರಿ ಐದನೇ ಸ್ಥಾನ ಪಡೆದಿದ್ದಾರೆ ಎಂದು ಸಂಘದ ಮುಖ್ಯ ಸಂಚಾಲಕರಾದ ಪುರಸಭಾ ಸದಸ್ಯ ಬಿ.ದೇವರಾಜ್ ತಿಳಿಸಿದ್ದಾರೆ.