ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಷ್ಟ್ರಾಭಿವೃದ್ಧಿಗೆ ಜಾತಿಗಳ ನಡುವಿನ ಸಂಘರ್ಷ ಅಡ್ಡಿ: ಶಾಸಕ ವಿಷಾದ

Rashmi Kasaragodu
Updated On : 28 Jan 2014, 1:33 am

ಹೊಸಕೋಟೆ: ರಾಷ್ಟ್ರಾಭಿವೃದ್ಧಿ ಹೊಂದಲು ಪ್ರಸ್ತುತ ಜಾತಿಗಳ ನಡುವೆ ಉಂಟಾಗುತ್ತಿರುವ ಸಂಘರ್ಷ, ಒಡಕು ಅಡ್ಡಿಯುಂಟುಮಾಡುತ್ತಿರುವುದು ವಿಷಾದನೀಯ ಎಂದು ಶಾಸಕ ಎನ್.ನಾಗರಾಜ್ ಹೇಳಿದರು.
ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಹಲವಾರು ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನದಿಂದಾಗಿ ದೇಶ ಸ್ವಾತಂತ್ರ್ಯಗಳಿಸಿದ್ದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಸುಗಮವಾದ ಆಡಳಿತಕ್ಕೆ ಅಗತ್ಯವಾದ ಸಂವಿಧಾನ ರೂಪಿಸಲಾಗಿದೆ. ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನಿಗದಿಪಡಿಸಿದಾಗ್ಯೂ ಸಮರ್ಪಕವಾದ ಹಕ್ಕುಗಳನ್ನು ಪಡೆಯಲು ಇಂದಿಗೂ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿರುವುದು ದುರಾದೃಷ್ಟಕರಎಂದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಕುಮಾರಸ್ವಾಮಿ ಮಾತನಾಡಿ ಸಂವಿಧಾನ ವಿಧಿಸಿರುವ ಕಟ್ಟುಪಾಡುಗಳನ್ನು ಪಾಲಿಸುವಲ್ಲಿ ಅವನತಿ ಕಂಡುಬರುತ್ತಿದ್ದು ಹಿರಿಯರ ಆಶೋತ್ತರಗಳನ್ನು ಈಡೇರಿಸಲು ಆದ್ಯತೆ ನೀಡಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ಕಮಲಾಕ್ಷಿ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಆರ್. ಷಫಿಉಲ್ಲಾ ಮಾತನಾಡಿದರು. ಬಿಇಓ ಪಿ. ಬೈಲಾಂಜಿನಪ್ಪ ಸ್ವಾಗತಿಸಿ, ಇಓ ದ್ಯಾಮಪ್ಪ ವಂದಿಸಿದರು. ಪಟ್ಟಣದ ಸರಕಾರಿ, ಖಾಸಗಿಯ 14 ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನದಲ್ಲಿ, 21 ಶಾಲೆಗಳ ವಿದ್ಯಾರ್ಥಿಗಳು ಸಾಮೂಹಿಕ ಕವಾಯಿತಿನಲ್ಲಿ ಭಾಗವಹಿಸಿದ್ದರು. ಸರಕಾರಿ ಬಾಲಕರ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ, ಸೆಂಟ್ ಜೋಸೆಫ್ ಪ್ರೌಢಶಾಲೆ, ಮಾಂಟ್ರಿಯಲ್ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement