ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಮಾನ ರೀತಿಯ ಶಿಕ್ಷಣ ಇರಲಿ: ದಯಾನಂದ

Rashmi Kasaragodu
Updated On : 28 Jan 2014, 1:33 am

ಆನೇಕಲ್ಲು: ಪ್ರೌಢಶಾಲೆಯ ಹಂತದಲ್ಲಿ ಮಕ್ಕಳಿಗೆ ಸಮಾನ ರೀತಿಯ ಶಿಕ್ಷಣ ನೀಡಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ಇರಬಾರದೆಂದು ಮೇಲ್ಮನೆ ಸದಸ್ಯ ಬಿ.ಟಿ. ದಯಾನಂದ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಆನೇಕಲ್ಲಿನಲ್ಲಿ  ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣಕ್ಕಾಗಿ ನೂರಾರು ಕೋಟಿ ರು. ವ್ಯಯಿಸುತ್ತಿದ್ದು ಪಠ್ಯ ಕ್ರಮದಲ್ಲಿ ಸಮಾನತೆ ಕಾಣುತ್ತಿಲ್ಲ. ಪ್ರಾದೇಶಿ ಭಾಷಾ ತಾರತಮ್ಯದ ಜೊತೆಗೆ ಶಿಕ್ಷಣ ಅನುಷ್ಠಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕಿದೆ ಎಂದರು.
ವಿಧಾನ ಪರಿಷತ್  ಹಾಗೂ ಸದನದಲ್ಲಿ ಈ ಬಗ್ಗೆ ಚರ್ಚಿಸಲು ಅನುವಾಗುವಂತೆ ಪ್ರಶ್ನೆಗಳು ಮೂಡಬೇಕೆಂದು ಶಾಸಕ ಬಿ. ಶಿವಣ್ಣಗೆ ತಿಳಿಸಿದರು.
ವೇದಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಪುರಪ್ರಮುಖರು ಹಾಗೂ ಮುಖಂಡರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement