ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎತ್ತಿನಹೊಳೆ ವಿರೋಧಿ ಬೈಕ್ ರ್ಯಾಲಿ

Mainashree
Updated On : 29 Jan 2014, 12:31 pm

ದೊಡ್ಡಬಳ್ಳಾಪುರ: ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ಜಾರಿ ವಿರೋಧಿಸಿ ಇಲ್ಲಿನ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೈಕ್ ರ್ಯಾಲಿ ನಡೆಸಿ ಪ್ರತಿಭಟಿಸಲಾಯಿತು.
ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರದವರೆಗೆ ನಡೆದ ರ್ಯಾಲಿಯಲ್ಲಿ ಸಮಿತಿಯ ಹತ್ತಾರು ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸಚಿವ ವೀರಪ್ಪ ಮೊಯ್ಲಿ ಅವರಿಗೆ ನೈಜ ಕಾಳಜಿ ಇದ್ದಿದ್ದರೆ 5 ವರ್ಷಗಳಿಂದ ಸುಮ್ಮನೆ ಕುಳಿತು ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವೈಜ್ಞಾನಿಕವಾಗಿ ಪ್ರಚಾರಕ್ಕಾಗಿ ಈ ಬಗೆಯ ದಿಕ್ಕುತಪ್ಪಿಸುವ ಯತ್ನಗಳನ್ನು ಮಾಡುತ್ತಿರಲಿಲ್ಲ ಎಂದು ಆರೋಪಿಸಿದರು.
ವಾಸ್ತವವಾಗಿ ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ನೆರವೇರಿಸಬೇಕಾದ್ದು ಮುದ್ದೇನಹಳ್ಳಿಯಲ್ಲಿ ಅಲ್ಲ. ಸಕಲೇಶಪುರದ ಬಳಿ ಬರುವ ಎತ್ತಿನಹೊಳೆ ಮೂಲದ ಬಳಿಯಲ್ಲಿ. ಆದರೆ ಇಲ್ಲಿನ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುವುದು ಕೂಡಲೇ ನಿಲ್ಲಬೇಕು ಎಂದರು.
ದೊಡ್ಡಬಳ್ಳಾಪುರ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು, ರೈತ ಸಂಘ, ಸಿಪಿಐ(ಎಂ) ಕನ್ನಡಪಕ್ಷ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement