ಮಾ.7ರಿಂದ ಜಾನಪದ ಕಲಾವಿದರ ಸಮಾವೇಶ
ನೆಲಮಂಗಲ: ತಾಲೂಕಿನ ಶ್ರೀ ವನಕಲ್ಲು ಮಲ್ಲೇಶ್ವರ ಸುಕ್ಷೇತ್ರ ಮತ್ತು ಕರ್ನಾಟಕ ರಾಜ್ಯ ಜಾನಪದ ಸಂಗೀತ ಮತ್ತು ಯಕ್ಷಗಾನ, ಬಯಲಾಟ ಕಲಾವಿದ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 7, 8 ಮತ್ತು 9ರಂದು ಜಾನಪದ ಕಲಾವಿದರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ತಿಳಿಸಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮಾವೇಶಕ್ಕೆ ಆಸಕ್ತ ಕಲಾ ತಂಡಗಳು ಭಾಗವಹಿಸಲು ತಮ್ಮ ಕಲಾ ಪ್ರಕಾರಗಳ ಹೆಸರು, ತಂಡ ನಾಯಕರ ಕಲಾವಿದ ಸಂಖ್ಯೆ ಮತ್ತು ಕಲಾವಿದರು ತಮ್ಮ ವಿಳಾಸಗಳನ್ನು ನೋಂದಾಯಿಸಿಕೊಳ್ಳಬೇಕು. ರಾಜ್ಯ ಅಧ್ಯಕ್ಷ ಕೆ.ಸಣ್ಣಹೊನ್ನಯ್ಯ ಈಟಲಗೆರೆ , ಕರ್ನಾಟಕ ರಾಜ್ಯ ಜಾನಪದ ಮತ್ತು ತುಮಕೂರು ಯಕ್ಷಗಾನ ಬಯಲಾಟ ಕಲಾವಿದರ ಸಂಘ, ಸಂಚಾರನಾಡಿ ಮೊ. 9449232563 ಅಥವಾ ಶ್ರೀ ವನಕಲ್ಲು ಮಲ್ಲೇಶ್ವರದ ಶ್ರೀ ಬಸವರಮಾನಂದ ಮಹಾಸ್ವಾಮಿ, ನರಸೀಪುರ ಅಂಚೆ, ಹೆಗ್ಗುಂದ, ನೆಲಮಂಗಲ (ತಾ), ದೂ. 9980618488 ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಿ, ಫೆ.25ರ ಒಳಗೆ ನೋಂದಾಯಿಸಲು ತಿಳಿಸಿದ್ದಾರೆ. ಬಿದಲೂರು ಸೋಮಶೇಖರ್, ಶಿಕ್ಷಕ ರಾಜಣ್ಣ ಇದ್ದರು.