ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಇಂಗ್ಲೀಷನ್ನೂ ಕಲಿಯಬೇಕು'

Rashmi Kasaragodu
Updated On : 30 Jan 2014, 2:04 am

ದೇವನಹಳ್ಳಿ: ನಮಗೆ ಯಾವುದೇ ಭಾಷೆಯ ಜ್ಞಾನ ತಿಳಿಯಬೇಕಾದರೆ ಇಂಗ್ಲೀಷ್ ಕಲಿಯಬೇಕು. ಆದರೆ ಆಂಗ್ಲಭಾಷೆಯನ್ನು ಕನ್ನಡಕ್ಕಾಗಿ ಕಲಿಯಬೇಕು ಎಂದು ಕವಿಗಳು ಹಾಗೂ ಭಾವಗೀತೆಗಳ ರಚನಕಾರ ಬಿ.ಆರ್.ಲಕ್ಷ್ಮಣರಾವ್ ತಿಳಿಸಿದರು.
ಇಲ್ಲಿನ ಜ್ಞಾನ ಗಂಗೋತ್ರಿ ಶಾಲೆಯ ಐದನೆಯ ವಾರ್ಷಿಕೋತ್ಸವ ಮತ್ತು ಚಿಣ್ಣರ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಕನ್ನಡ ಮಾತೃ ಭಾಷೆ ಹೃದಯ ಭಾಷೆಯಾಗಿರಲಿ ಎಂದು ತಿಳಿಸಿ ಇಂದು ಕನ್ನಡವನ್ನು ಕನ್ನಡಿಗರಿಂದ ಕಾಪಾಡಬೇಕಿದೆ ಎಂದು ತಿಳಿಸಿ ಶಾಲೆಗಳಲ್ಲಿ ಕನ್ನಡತನವನ್ನು ಉಳಿಸಿಕೊಂಡು ಇಂಗ್ಲೀಷ್ ಕಲಿಸಬೇಕು ಎಂದರು.
 ನಿವೃತ್ತ ಪ್ರಾಧ್ಯಾಪಕಿ ಹಾಗೂ ಅನುವಾದಕಿ ಸುಶೀಲಾ ಪುನೀತ ಅವರು ಚಿಕ್ಕ ಮಕ್ಕಳಿಗೆ ಪ್ರಶಸ್ತಿ ಪ್ರದಾನಮಾಡಿದರಲ್ಲದೆ ಪೋಷಕರು ತಮ್ಮ ಮಕ್ಕಳು ಹೀಗೆ ಆಗಬೇಕೆನ್ನುವುದನ್ನು ಬಿಟ್ಟು ಅವರ ಆಸೆಗೆ ತಕ್ಕಂತೆ ಪ್ರೋತ್ಸಾಹ ನೀಡಲಿ. ಅಲ್ಲದೆ ಮುಖ್ಯವಾಗಿ ಅವರಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿ ಎಂದರು.
 ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಸಂಸ್ಥಾಪಕ ಅಧ್ಯಕ್ಷ ದಾಸಪ್ಪ ವಹಿಸಿದ್ದರು. ಕಾರ್ಯದರ್ಶಿ ದೀಪಕ್ ಶಾಲಾ ವರದಿ ನೀಡಿದರು. ಶಿಕ್ಷಕ ಮುನಿರಾಜು ವಂದನೆ ಅರ್ಪಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರತಿಭಾ ಪುರಸ್ಕಾರ ಸಮಾರಂಭ

ಕನಕಪುರ: ಕನಕಪುರದ ಬ್ಲಾಸಂ ಶಾಲಾ ಸಭಾಂಗಣದಲ್ಲಿ ಭಾರತೀಯ ಜೀವವಿಮಾ ನಿಗಮ ವತಿಯಿಂದ 65ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಉದ್ಘಾಟನೆಯನ್ನು ಎಲ್ಐಸಿ ಹಿರಿಯ ಶಾಖಾಧಿಕಾರಿ ಶ್ರೀನಿವಾಸ್ ನೆರವೇರಿಸಿದರು. ಪ್ರಾಂಶುಪಾಲ ಗಂಗಾಬಿಕಾ ಅಧ್ಯಕ್ಷತೆ ವಹಿಸಿದ್ದರು.
ಕನಕಪುರದ ಜೀವವಿಮಾ ಶಾಖೆ ಪ್ರತೀವರ್ಷ ಎರಡು ಸರ್ಕಾರಿ ಹಾಗೂ ಮೂರು ಅನುದಾನ ರಹಿತ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿದೆ, ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಉತ್ತೇಜಿಸುವ ಸಲುವಾಗಿ ಎಲ್ಐಸಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶಾಖಾಧಿಕಾರಿ ಶ್ರೀನಿವಾಸ್ ನುಡಿದರು. ಕಾರ್ಯಕ್ರಮದ ಅಂಗವಾಗಿ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಾ. ಶಶಿಧರ್ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಂ.ವೆಂಕಟೇಶ್, ಕಾರ್ಯದರ್ಶಿ ಕಾ.ಪ್ರಕಾಶ್, ರಂಗಕಲಾ ಶಿಕ್ಷಕ ಜಗದೀಶ್ವರಾಚಾರ್ಯ ಪಾಲ್ಗೊಂಡಿದ್ದರು. ಶಿಕ್ಷಕ ನಾಗೇಂದ್ರಪ್ಪ ಸ್ವಾಗತಿಸಿದರು. ಸಹಶಿಕ್ಷಕಿ ಮಮತಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement