ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಹೋರಾಟ ಸಮಿತಿ ಧರಣಿ 10ನೇ ದಿನಕ್ಕೆ

Rashmi Kasaragodu
Updated On : 30 Jan 2014, 2:03 am

ದೇವನಹಳ್ಳಿ: ಇಲ್ಲಿನ ಜಿಲ್ಲಾ ಹೋರಾಟ ಸಮಿತಿಯವರು ಕಳೆದ 9 ದಿನಗಳಿಂದ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದು ಬುಧವಾರ ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ಭಾಗವಹಿಸಿ ಧರಣಿಗೆ ಬೆಂಬಲ ನೀಡಿದರು.
ಮಂಗಳವಾರ ನಡೆದ ದೇವನಹಳ್ಳಿ ಯಶಸ್ವಿ ಬಂದ್ ಸಂಧರ್ಭದಲ್ಲಿ ಸಹಕಾರ ನೀಡಿದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು, ವಕೀಲರ ಸಂಘ ವರ್ತಕರ ಸಂಘ ಕನ್ನಡ ಪರ ಸಂಘಟನೆಗಳು , ಮಹಿಳಾ ಸಂಘಗಳು ಅಲ್ಲದೆ ನಾಗರಿಕರಿಗೆ ಜಿಲ್ಲಾ ಹೋರಾಟ ಸಮಿತಿ ಮುಖ್ಯ ಸಂಚಾಲಕ ಬಿ.ಕೆ.ಶಿವಪ್ಪ ಅಭಿನಂದಿಸಿದರ.  ನಮ್ಮ ಗುರಿ ಜಿಲ್ಲಾಧಿಕಾರಿಗಳ ಮತ್ತು ಇತರ ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳ ಸ್ಥಳಾಂತರವಾಗುವವರೆಗೂ ಧರಣಿ ಮುಂದುವರೆಯಲಿದೆ ಎಂದು ತಿಳಿಸಿದರು. ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕುಗಳು ಸೇರಿದಂತೆ ಪ್ರತ್ಯೇಕ ಕಂದಾಯ ಉಪ ವಿಭಾಗ ಕಚೇರಿ ತೆರೆಯಲು ಮುಖ್ಯಮಂತ್ರಿಗಳು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿರುವುದು ಸಂತಸ ತಂದಿದ್ದರೂ ನಮಗೆ ಸರ್ಕಾರದಿಂದ ಅಧಿಕೃತ ಆದೇಶ ಬೇಕಾಗಿದೆ ಎಂದರು.
ಪ್ರಜಾ ವಿಮೋಚನಾ ಚಳವಳಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿ ಆಂಜಿನಪ್ಪ, ತಾಲೂಕು ಅಧ್ಯಕ್ಷ ಸಿಂಗ್ರಹಳ್ಳಿ ನರಸಿಂಹಮೂರ್ತಿ, ಜಾಲಿಗೆ ಗ್ರಾಮ ಪಂ.ಉಪಾಧ್ಯಕ್ಷ ಎಸ್.ಎಂ. ಆನಂದಕುಮಾರ್, ಜಾಲ ಕಿಟ್ಟಿ, ಮುತ್ತುರಾಜಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement