ದೊರೆತನಕ ದೂರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ
ಆನೇಕಲ್: ಅಕ್ರಮ ಭೂಮಿ ಸಕ್ರಮ, ಹಕ್ಕುಪತ್ರ ನೀಡುವಿಕೆ, ಮೋಜಣಿದಾರರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಜೈ ಜಮದಗ್ನಿ ಸಾತ್ವಿಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಿ. ತೋಪಯ್ಯ ನೇತೃತ್ವದಲ್ಲಿ ಜ.31 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಚಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರೈತ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ದೊರೆತನಕ ದೂರು ಪ್ರತಿಭಟನೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಚಾಲಕ ಸಿ. ಆನಂದ್ ಮನವಿ ಮಾಡಿದ್ದಾರೆ.