ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಿನಚರಿ ಬಿಡುಗಡೆ

Rashmi Kasaragodu
Updated On : 31 Jan 2014, 1:53 am

ಹೊಸಕೋಟೆ : ಸರಕಾರಿ ನೌಕರರ ಸಂಘದ 2014ರ ದಿನಚರಿಯನ್ನು ಸಂಘದ ಅಧ್ಯಕ್ಷ ಡಾ. ಸಿ.ಎನ್.ನಾರಾಯಣ ಸ್ವಾಮಿ ಸರಕಾರಿ ನೌಕರರ ಭವನದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಸಂಘವು ಸರಕಾರಿ ನೌಕರರ ಹಿತ ಕಾಪಾಡುವುದರೊಂದಿಗೆ ಪ್ರತಿ ವರ್ಷಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುತ್ತಿದೆ. ತಜ್ಞರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಸರಕಾರಿ ನೌಕರರ ಕಾರ್ಯದಕ್ಷತೆ ಹೆಚ್ಚಾಗುವುದರೊಂದಿಗೆ ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ಸಾರ್ವಜನಿಕರ ವಿಶ್ವಾಸಗಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸರ್ವೋದಯ ದಿನಾಚರಣೆ
ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮ ಗುರುವಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ರಾಜಶೇಖರಯ್ಯ ಮಾತನಾಡಿ ಹಲವು ಅಸಮಾನತೆಗಳ ಗೂಡಾಗಿರುವ ಭಾರತದ ಪ್ರಗತಿಗೆ ಗಾಂಧಿ ಕಂಡ ಸರ್ವೋದಯ ಮಂತ್ರ ಪರಿಹಾರವಾಗಬಲ್ಲುದು. ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಿ ಹಲವು ಅಕ್ರಮಗಳಿಗೆ ಕಾರಣವಾಗಿದ್ದು, ಅದು ಸಂಪೂರ್ಣ ನಿಲ್ಲಬೇಕು. ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಎಂದರು. ಕಾಲೇಜು ಆವರಣ ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್.ಕೆ. ಹನುಮೇಗೌಡ, ವೃಂದಮ್ಮ, ಮಂಜುಳಾ, ಶ್ರೀನಿವಾಸ್, ಮತ್ತಿತರರು ಭಾಗವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement