ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿಯಂತ್ರಣಕ್ಕೆಪರದಾಡಿದ ಪೊಲೀಸರು

Rashmi Kasaragodu
Updated On : 31 Jan 2014, 1:52 am

ಆನೇಕಲ್: ತಾಲೂಕು ಇಂಡ್ಲವಾಡಿ ಸಮೀಪದ ಎಫ್‌ಎಸ್‌ಸಿ ಗೋದಾಮಿನಲ್ಲಿ ರಾಜ್ಯ, ಹೊರ ರಾಜ್ಯ ಹಾಗೂ ಚೀನಾ ದೇಶದಿಂದ ಆಮದು ಮಾಡಿಕೊಂಡ ಲೆದರ್, ವಸ್ತ್ರಗಳು, ಸಿದ್ಧ ಉಡುಪುಗಳು, ವಿದ್ಯುನ್ಮಾನ ಹಾಗೂ ವಿದ್ಯುತ್ ಉಪಕರಣಗಳ ದಾಸ್ತಾನು ಮಾಡಲಾಗುತ್ತದೆ.
ಇಲ್ಲಿಗೆ ಬೃಹತ್ ಪ್ರಮಾಣದಲ್ಲಿ ತರಿಸಿಕೊಂಡು ಬೆಂಗಳೂರಿನ ದೈತ್ಯ ಮಾಲ್‌ಗಳಾದ ಬಿಗ್ ಬಜಾರ್, ಬ್ರಾಂಡ್ ಫ್ಯಾಕ್ಟರಿ, ಮೆಟ್ರೋ ಸೇರಿದಂತೆ ವಿವಿಧ ಸಗಟು ಮಾರಾಟಗಾರರಿಗೆ ಬಿಕರಿ ಮಾಡಲಾಗುತ್ತದೆ. ಗೋದಾಮಿಗೆ ರಕ್ಷಣಾ ವ್ಯವಸ್ಥೆ ಇದ್ದು, ಕಾರ್ಮಿಕರನ್ನು ರಕ್ಷಿಸಲು ಸೈರನ್ ಮೊಳಗಿಸಲಾಯಿತು. ಎಲ್ಲರೂ ಹೊರಬಂದುದನ್ನು ಖಾತರಿ ಮಾಡಿಕೊಂಡು ಮುಂದೆ ಹೆಜ್ಜೆ ಇಡಬೇಕಾದ ಸಮಯಕ್ಕೆ ಗೋದಾಮಿನ ಎಲ್ಲ ಭಾಗಕ್ಕೂ ಬೆಂಕಿ ಆವರಿಸಿತ್ತು. ಎನೂ ಮಾಡಲಾಗದ ಸ್ಥಿತಿಯಲ್ಲಿರಬೇಕಾಯಿತು. ಗೋದಾಮಿನ ಸುತ್ತಲೂ ನೀರಿನ ಪೈಪ್ ಅಳವಡಿಸಲಾಗಿದೆ. ವಿಮೆಯೂ ಮಾಡಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕುತೂಹಲ ತಂದ ಅಡಚಣೆ:  ಗೋದಾಮಿಗೆ ಬೆಂಕಿ ಬಿದ್ದ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಜನ ಗೋದಾಮಿನ ಸುತ್ತಲೂ ಜಮಾಯಿಸಿ ಅವಘಡವನ್ನು ನೋಡುತ್ತಿದ್ದರು. ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ಕಷ್ಟವಾಯಿತು. ಪಿಎಸ್ಸೈ ಗಳಾದ ರಾಘವೇಂದ್ರ ಬೈಂದೂರು, ಚೇತನ್‌ಕುಮಾರ್ ಮತ್ತು ಸಿಬ್ಬಂದಿ ಹರಸಾಹಸ ಪಟ್ಟು ಜನರನ್ನು ನಿಯಂತ್ರಿಸಿ ಅಗ್ನಿ ಶಾಮಕ ವಾಹನಗಳು ಗೋದಾಮು ಪ್ರವೇಶಿಸಲು ಅನುವು ಮಾಡಿಕೊಟ್ಟರು.
ಬೆಂಕಿಯಿಂದಾಗಿ ಹೊಗೆ ಎದ್ದು ಸುತ್ತಲೂ 5 ಕಿಮೀ ವ್ಯಾಪ್ತಿಗೆ ಪಸರಿಸಿತು. ದೂರು ದಾಖಲಿಸಿಕೊಂಡಿದ್ದು ತನಿಖೆ ಹಾಗೂ ಕ್ರಮ ವಹಿಸುವುದಾಗಿ ವೃತ್ತ ನಿರೀಕ್ಷಕ ಕಿಶೋರ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement