ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾನನಷ್ಟ ಮೊಕದ್ದಮೆ: ಸಂಸದ ಸುರೇಶ್ ಗುಡುಗು

Rashmi Kasaragodu
Updated On : 31 Jan 2014, 1:51 am

ರಾಮನಗರ: ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ಪಿತೂರಿ ನಡೆಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.  ರಾಮನಗರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಗುರುವಾರ ಜನ ಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೊಕದ್ದಮೆ ಹೂಡುವ ಸಂಬಂಧ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುವುದು ಎಂದರು.
ನನ್ನ ಮತ್ತು ಸಹೋದರ ಶಿವಕುಮಾರ್ ಅವರಿಗೆ ರಾಜಕೀಯ ಹಿನ್ನೆಡೆ ಉಂಟು ಮಾಡಬೇಕೆನ್ನುವ ವ್ಯವಸ್ಥಿತ ಪಿತೂರಿ ಮೊದಲಿಂದಲೂ ನಡೆಯುತ್ತಿದೆ. ಈಗ ಆ ವ್ಯರ್ಥ ಹೋರಾಟದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ ಎಂದು ಅವರು ಟೀಕಿಸಿದರು.
ಶ್ರೇಯೋಭಿವೃದ್ಧಿಗೆ ಶ್ರಮ: ಬೆಂಗಳೂರಿನಲ್ಲಿರುವ ಆರ್ಯ ವಿದ್ಯಾ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಶಿವಕುಮಾರ್ ಮತ್ತು ನಾನು ಶ್ರಮಿಸುತ್ತಿದ್ದೇವೆ. ನಮ್ಮ ಸಮಾಜ ಸೇವಾ ಕೆಲಸಗಳನ್ನು ಸಹಿಸದ ವಿರೋಧಿಗಳು ಸುಳ್ಳು ಆರೋಪಗಳನ್ನು ಹೊರಿಸಿ, ರಾಜಕೀಯವಾಗಿ ಹಣಿಯಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಸುರೇಶ್ ತಿಳಿಸಿದರು.
ಪ್ರತಿನಿತ್ಯ ಒಂದು ಬಾರಿಯಾದರೂ ನನ್ನ ಮತ್ತು ಸಹೋದರ ಶಿವಕುಮಾರ್ ಹೆಸರೆತ್ತದೆ ಇರಲು ವಿರೋಧಿಗಳಿಗೆ ಸಮಾಧಾನವಿಲ್ಲ. ನಮ್ಮ ತೇಜೋವಧೆಗೆ ನಡೆಸುತ್ತಿರುವ ನಡೆಸುತ್ತಿರುವ ವೃಥಾ ಪ್ರಯತ್ನ ಯಾವ ಕಾರಣಕ್ಕೂ ಫಲಿಸುವುದಿಲ್ಲ ಎಂದು ಅವರು ೇಡಿಸಿದರು.
ವರದಿಗೆ ಸೂಚನೆ: ರಾಮನಗರ ನಗರಸಭೆ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಳಿಕ ಸಂಬಂಧಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ, ಅಭಿವೃದ್ಧಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement