ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಹಣಿ ತಪ್ಪುಗಳ ತಿದ್ದುಪಡಿ ಶೀಘ್ರ ಸರಿಪಡಿಸುವ ವಿಶ್ವಾಸ

Mainashree
Updated On : 31 Jan 2014, 11:38 am

ಮಾಗಡಿ: 2014 ರ ಮಾರ್ಚ್ 31 ರೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ರೈತರ  ಪಹಣಿಯಲ್ಲಿನ 3 ಮತ್ತು 9 ರ ಕಾಲಂಗಳ ತಪ್ಪುಗಳ ತಿದ್ದುಪಡಿಯನ್ನು ಸಂಪೂರ್ಣವಾಗಿ ಈಡೇರಿಸುವ ಗುರಿ ಹೊಂದಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಭರವಸೆ ನೀಡಿದರು.
 ಅವರು ತಾಲೂಕಿನ ಸೋಲೂರು ಪ್ರವಾಸಿ ಮಂದಿರದಲ್ಲಿ ಸೋಲೂರು ಹೋಬಳಿ ವ್ಯಾಪ್ತಿಯ ಖಾತಾ ಆಂದೋಲನಾ ಅಭಿಯಾನಕ್ಕೆ ಜೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಹಲವಾರು ವರ್ಷಗಳಿಂದ ರೈತರು ತಮ್ಮ ಭೂಮಿಯ ಪಹಣಿಯಲ್ಲಿನ ಲೋಪದೋಷಗಳ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ ಎಂಬ ದೂರುಗಳ ಬಂದ ಹಿನ್ನೆಲೆಯಲ್ಲಿ ಜಿಲ್ಲಾದ್ಯಾದಂತ ಖಾತಾ ಆಂದೋಲನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೈತರ ಪಹಣಿಯಲ್ಲಿನ
3 ಮತ್ತು 9 ರ ಕಾಲಂ ಲೋಪದೋಷಗಳ ತಿದ್ದುಪಡಿ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿಯೇ ನಿವಾರಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 17,945 ಅರ್ಜಿಗಳು ಬಾಕಿಯಿದೆ. ಮಾಗಡಿ ತಾಲೂಕಿನಲ್ಲಿ ಸುಮಾರು 8,574 ರೈತರ ಅರ್ಜಿಗಳು ಬಾಕಿಯಿದ್ದು, ಇದರಲ್ಲಿ ಈಗಾಗಲೇ 2,410 ರೈತರ ಅರ್ಜಿಗಳ  ಪಹಣಿಯಲ್ಲಿನ 3 ಮತ್ತು 9 ರ ಕಾಲಂನಲ್ಲಿನ ಲೋಪದೋಷಗಳ ತಿದ್ದುಪಡಿ ಮಾಡಲಾಗಿದೆ  ಎಂದು ತಿಳಿಸಿದರು.
ಅನುಷ್ಠಾನ: ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ನಾಗರಿಕರಿಗೆ ತಲುಪಿಸಲು ಮಹತ್ವಕಾಂಕ್ಷೆಯಿಂದ ಮನಸ್ವಿನಿ, ಮೈತ್ರಿ ಯೋಜನೆ, ಸಂಧ್ಯಾ ಸುರಕ್ಷಾ,ಇನ್ನಿತರೆ  ಯೋಜನೆಯನ್ನು ಜನತೆಗೆ ವಿವರಿಸುವ ಮೂಲಕ ಅನುಷ್ಠಾನಗೊಳಿಸಲು ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ತಾಲೂಕು ಕಚೇರಿ, ಗ್ರಾಮ ಪಂಚಾಯ್ತಿಗಳು ಯೋಜನೆಯ ಮಹತ್ವದ ಮಾಹಿತಿಯನ್ನು ನಾಗರಿಕರಲ್ಲಿ ಜನಜಾಗೃತಿಗೊಳಿಸಬೇಕೆಂದು ಆದೇಶಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂರಾರು ರೈತರಿಗೆ ಪಹಣಿ ತಿದ್ದುಪಡಿ, ಪಿಂಚಣಿ ಯೋಜನೆಯ ಪ್ರಮಾಣ ಪತ್ರಗಳನ್ನು ಜಿಲ್ಲಾಧಿಕಾರಿ  ವಿತರಿಸಿದರು.  ನೂರಾರು ರೈತರಿಂದ  ಜಿಲ್ಲಾಧಿಕಾರಿಗಳು ಅಹವಾಲು ಸ್ವೀಕರಿಸಿದರು. ಸೋಲೂರು ಗ್ರಾ.ಪಂ. ಅಧ್ಯಕ್ಷೆ
ನಾಗರತ್ನಮ್ಮ ನಾಗರಾಜು, ಉಪವಿಭಾಗಾಧಿಕಾರಿ ಸಿದ್ದಯ್ಯ, ಭೂ ಮಾಪನಾ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್, ತಹಸೀಲ್ದಾರ್ ಶಿವಕುಮಾರ್, ಉಪ ತಹಸೀಲ್ದಾರ್ ಶಿವಕುಮಾರ್, ಶಿರಸ್ತೇದಾರ್ ಗುರುಲಿಂಗಯ್ಯ, ರೆವಿನ್ಯೂ ಅಧಿಕಾರಿಗಳಾದ ಮಹಾಲಿಂಗಪ್ಪ, ವಿಜಯಕುಮಾರ್, ನಾಗೇಂದ್ರಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ  ವೆಂಕಟೇಶ್, ವೀರೇಶ್, ಹೇಮಾವತಿ, ಯಶೋಧಮ್ಮ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement