ತಂದೆ-ತಾಯಿ ಕಳೆದುಕೊಂಡ ಬಾಲಕನ ಚಿಕಿತ್ಸೆ ನೆರವಿಗೆ ಮನವಿ
ದೇವನಹಳ್ಳಿ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ವಿದ್ಯಾರ್ಥಿ ಹಫೀದ್ ಪಾಷ (15) ಎಂಬ ವಿದ್ಯಾರ್ಥಿ ಮನೆಯಲ್ಲಿ ಕಳೆದ 6 ತಿಂಗಳ ಹಿಂದೆ ನಡೆದ ಬೆಂಕಿ ಆಕಸ್ಮಿಕದಲ್ಲಿ ತೀವ್ರಗಾಯಗೊಂಡು ಚಿಕಿತ್ಸೆಗೆ ಶಾಲೆಯ ಶಿಕ್ಷಕರು ದಾನಿಗಳ ಸಹಕಾರ ಕೋರುತ್ತಿದ್ದಾರೆ. ದೇವನಹಳ್ಳಿ ಬೆಸ್ಕಾಂ ಕಚೇರಿ ಹಿಂಭಾಗದ ರಸ್ತೆಯ ಮನೆಯೊಂದರಲ್ಲಿ (ತಂದೆ-ತಾಯಿ ಕಳೆದುಕೊಂಡಿದ್ದಾನೆ) ವಾಸವಾಗಿದ್ದಾನೆ. ವ್ಯಾಸಂಗ ಕೂಡ ಮುಂದುವರೆಸಿದ್ದ. ಆದರೆ ಮನೆಯಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಮುಖ ಬಿಟ್ಟು ದೇಹದ ಉಳಿದ ಭಾಗ ಸುಟ್ಟು ತೀವ್ರ ಗಾಯಗೊಂಡಿದ್ದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದಾನೆ. ಆದರೆ ಆ ಬಾಲಕನಿಗೆ ಇನ್ನೂ ಹೆಚ್ಚಿನ ಚಿಕಿತ್ಸೆಯನ್ನು ಇಲ್ಲಿನ ಆಕಾಶ್ ಆಸ್ಪತ್ರೆಯ ವೈದ್ಯರು ನೀಡಲಿದ್ದು ಸುಮಾರು ಎರಡು ಲಕ್ಷ ರು.ವೆಚ್ಚವಾಗುವ ಸಂಭವವಿದೆ. ಆದ್ದರಿಂದ ಬಾಲಕನ ಜೀವ ಉಳಿಸಿ ಮತ್ತೆ ವಿದ್ಯೆ ಮುಂದುವರೆಸಲು ದಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಪುರಸಭೆ ಮಾಜಿ ಉಪಾಧ್ಯಕ್ಷ ಎ.ಚಿನ್ನಪ್ಪ ಅವರು ಹತ್ತು ಸಾವಿರ ರು. ನೀಡುವುದಾಗಿ ತಿಳಿಸಿದರು. ಹಣ ಸಹಾಯ ಾಡುವವರು ಹಫೀದ್ ಪಾಷ ದೇವನಹಳ್ಳಿ ಕೆನರಾ ಬ್ಯಾಂಕ್ ಉಳಿತಾಯ ಖಾತೆ ನಂ 0474108032025 ಧನ ಸಹಾಯ ಮಾಡಬಹುದು. ಇಲಾಖೆಗೆ ದಾಖಲೆ ಒದಗಿಸಿದರೆ ಸರ್ಕಾರದಿಂದ 30 ಸಾವಿರ ರು. ಧನ ಸಹಾಯ ದೊರೆಯಲಿದೆ.