ಫಲಾನುಭವಿಗಳ ಆಯ್ಕೆಗೆ ಅರ್ಜಿ ಆಹ್ವಾನ
ರಾಮನಗರ: ವಿವಿಧ ಯೋಜನೆಯಡಿ ನಗರಸಭಾ ವ್ಯಾಪ್ತಿಯ ಅರ್ಹ ನಿವೇಶನ ರಹಿತ ಹಾಗೂ ವಸತಿ ರಹಿತರಿಗೆ ಸವಲತ್ತುಗಳನ್ನು ನೀಡಲು ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ರಾಮನಗರ ನಗರಸಭೆಯ ವ್ಯಾಪ್ತಿಯಲ್ಲಿರುವ ಮಹಿಳೆಯರು, ಅಂಗವಿಕಲರು, ವಿಧವೆಯರು, ಹಿರಿಯ ನಾಗರಿಕರು, ಮಾಜಿ ಸೈನಿಕರಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ವಸತಿ ರಹಿತರಾಗಿದ್ದು, ಮಾಸಿಕ ಆದಾಯ ಗರಿಷ್ಠ ರು.7,300ರ ಒಳಗಿರಬೇಕು. ನಿವೇಶನ ರಹಿತರ ವಾರ್ಷಿಕ ಆದಾಯ ರು.32 ಸಾವಿರದ ಒಳಗಿರಬೇಕು. ಇತ್ತೀಚಿನ 3 ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್ ಅನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕರು, ವಿಧವೆಯರು, ಅಂಗವಿಕಲರಿಗೆ ಮೀಸಲಾತಿ ಇರುತ್ತದೆ. ಅರ್ಜಿದಾರರು ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ, ರಾಜ್ಯದ ಇತರೆಡೆ ಯಾವುದೇ ತರಹ ನಿವೇಶನ ಮತ್ತು ಮನೆ ಹೊಂದಿರಬಾರದು. ಈ ಬಗ್ಗೆ ಅಫಿಡೆವಿಟ್ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯನ್ನು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಜಿ.ಎ.ಯಶವಂತಕುಮಾರ್ ತಿಳಿಸಿದ್ದಾರೆ.
ಹಿಂದಿ ಶಿಕ್ಷಕ್ ತರಬೇತಿ
ರಾಮನಗರ: ಬೆಂಗಳೂರಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿಂದಿ ಶಿಕ್ಷಕ್ ತರಬೇತಿ ಕೋರ್ಸ್‌ಗೆ ಮಂಡ್ಯದ ಕರ್ನಾಟಕ ಹಿಂದಿ ಸಭಾದಿಂದ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ಜೆಒಸಿ ಉತ್ತೀರ್ಣತೆ ಹೊಂದಿದ್ದು, ಹಿಂದಿ ವಿದ್ವಾನ್, ರತ್ನ, ಪ್ರವೀಣ್, ಪದವಿಯಲ್ಲಿ ಐಚ್ಛಿಕ ಹಿಂದಿ, ಎಂಎ ಹಿಂದಿಯಲ್ಲಿ ಶೇ.50 ರಷ್ಟು(ಎಸ್‌ಸಿ, ಎಸ್‌ಟಿಗೆ ಶೇ.45), ಸೇವಾ ನಿರತ ಶಿಕ್ಷಕರು 45 ವರ್ಷದೊಳಗಿನವರು ಪ್ರವೇಶ ಪಡೆಯಲು ಅರ್ಹರು. ಅರ್ಜಿ ಸಲ್ಲಿಸಲು ಜು.14ರೊಳಗೆ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜು, ಹಿಂದಿ ಭವನ, ಮಂಡ್ಯ. ದೂ.08232-226667, ಮೊ.9448268114 ಸಂಪರ್ಕಿಸಬಹುದು.