ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಮಾಜ ಕಲ್ಯಾಣ ಅಧಿಕಾರಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 3 Jul 2014, 1:41 am

ರಾಮನಗರ: ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ತೇಜಾನಂದರೆಡ್ಡಿ ಅವರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ. ಏತನ್ಮಧ್ಯೆ, ತೇಜಾನಂದರೆಡ್ಡಿ ಅವರನ್ನು ಬೆಂಬಲಿಸಿ ಛಲವಾದಿ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಕಚೇರಿಯಲ್ಲಿ ತೇಜಾನಂದರೆಡ್ಡಿ ಮತ್ತು ಅಧೀನ ಸಿಬ್ಬಂದಿ ನಡುವಿನ ಕಲಹ ತಾರಕ್ಕೇರಿತ್ತು. ತೇಜಾನಂದರೆಡ್ಡಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಬ್ಬಂದಿ ಪ್ರತಿಭಟನೆ ಹಾದಿ ಹಿಡಿದು ವಿವಾದ ಸೃಷ್ಟಿಸಿದ್ದರು. ಕರುನಾಡ ಸೇನೆ ಕಾರ್ಯಕರ್ತರು ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ತೇಜಾನಂದರೆಡ್ಡಿ ಅವರಿಗೆ ಬೆಂಬಲವಾಗಿ ನಿಂತಿದ್ದರು. ಛಲವಾದಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಖಂಡಿಸಿದ್ದಾರೆ. ಈ ನಡುವೆ, ಬುಧವಾರವೇ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯಿಂದ ತೇಜಾನಂದರೆಡ್ಡಿ ಅವರ ಅಮಾನತು ಆದೇಶ ಹೊರ ಬಿದ್ದಿದೆ. ಇದನ್ನು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಕನ್ನಡಪ್ರಭಕ್ಕೆ ಖಚಿತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement