ಬಿಡದಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ನಾಳೆ
ರಾಮನಗರ: 220 ಕೆ.ವಿ. ಪಿಜಿಸಿಐಎಲ್ ಲೈನ್ನಲ್ಲಿ ತುರ್ತು ಕಾಮಗಾರಿ ನಡೆಸಬೇಕಿರುವುದರಿಂದ ಜು.6ರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಬಿಡದಿ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಈ ನಿಟ್ಟಿನಲ್ಲಿ ಗ್ರಾಹಕರು ಸಹಕರಿಸಬೇಕು ಎಂದು ವಿಭಾಗ ಎಇಇ ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯ ಪ್ರದೇಶಗಳು: ಬಿಡದಿ ವಿತರಣಾ ಕೇಂದ್ರ ವ್ಯಾಪ್ತಿಯ ಬಿಡದಿ ಕೈಗಾರಿಕಾ ಪ್ರದೇಶ, ಅಬ್ಬನಕುಪ್ಪೆ, ಬೈರಮಂಗಲ, ಇಟ್ಟುಮಡು, ಹುಚ್ಚಮ್ಮನದೊಡ್ಡಿ, ಬನ್ನಿಕುಪ್ಪೆ, ಗಾಣಕಲ್ಲು, ರಾಮನಗರ ಕೇಂದ್ರ ವ್ಯಾಪ್ತಿಯ ಹುಣಸನಹಳ್ಳಿ, ತುಂಬೇನಹಳ್ಳಿ, ಅಚ್ಚಲು, ವಡೇರಹಳ್ಳಿ, ಅರ್ಚಕರಹಳ್ಳಿ, ರಾಮನಗರ ಟೌನ್ ಹಾಗೂ ಸುತ್ತಮುತ್ತಲ ಪ್ರದೇಶಗಳು. ಕೆಂಪನಹಳ್ಳಿ ಕೇಂದ್ರ ವ್ಯಾಪ್ತಿಯ ಹೆಗ್ಗಡಗೆರೆ, ಮಾಯಗಾನಹಳ್ಳಿ, ಕೆಂಪನಹಳ್ಳಿ, ಕಲ್ಲುಗೋಪಹನಹಳ್ಳಿ, ಕೆಂಚನಕುಪ್ಪೆ ಹಾಗೂ ಮೆಳೆಹಳ್ಳಿ ಕೇಂದ್ರ ವ್ಯಾಪ್ತಿಯ ಮೆಳೆಹಳ್ಳಿ, ಮನಮಾನಹಳ್ಳಿ, ತಿಮ್ಮಸಂದ್ರ ಹಾಗೂ ಸುತ್ತಲಿನ ಪ್ರದೇಶಗಳು. ಜಾಲಮಂಗಲ ಕೇಂದ್ರ ವ್ಯಾಪ್ತಿಯ ಜಾಲಮಂಗಲ, ಅಕ್ಕೂರು, ಹೊಂಬೇಗೌಡನದೊಡ್ಡಿ, ಕೂಟಗಲ್ಲು ಕೇಂದ್ರದ ಕೂಟಗಲ್ಲು, ಹುಣಸೇದೊಡ್ಡಿ, ಹೊಸೂರು, ಶ್ಯಾನುಭೋಗನಹಳ್ಳಿ, ಚಿಕ್ಕಗಂಗವಾಡಿ ಕೇಂದ್ರದ ಚಿಕ್ಕಗಂಗವಾಡಿ, ಬಾಳನಿಂಗೇಗೌಡನದೊಡ್ಡಿ, ತಿರುಮಲೇಗೌಡನದೊಡ್ಡಿ, ಹೆಜ್ಜಾಲ ಕೇಂದ್ರದ ಹೆಜ್ಜಾಲ, ಐನೋರ್ಪಾಳ್ಯ, ಕಣಿಮಿಣಿಕೆ, ಮಂಚನಾಯಕನಹಳ್ಳಿ, ಬೇವೂರು ಕೇಂದ್ರದ ಬೇವೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.