ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಾ.ವಿಷ್ಣುಗೆ ಮಂದಿರ ಕಟ್ಟಿದ ಅಭಿಮಾನಿಗಳು

Rashmi Kasaragodu
Updated On : 7 Jul 2014, 2:09 am

ನೆಲಮಂಗಲ: ಡಾ.ವಿಷ್ಣುವರ್ಧನ್ ಅವರು ನಿಧನದ ನಂತರ, ಕನ್ನಡನಾಡಿನ ಪ್ರತಿಯೊಬ್ಬರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ ಎನ್ನುವುದಕ್ಕೆ ಅವರಿಗೊಂದು ಮಂದಿರ ಕಟ್ಟಿ ಪೂಜಿಸುತ್ತಿರುವುದೇ ಸಾಕ್ಷಿ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ಭಾನುವಾರ ಪಟ್ಟಣ ಸಮೀಪದ ಸೊಂಡೆಕೊಪ್ಪ ರಸ್ತೆಯ ಹೊನ್ನಗಂಗಯ್ಯನಪಾಳ್ಯದಲ್ಲಿ ಡಾ.ವಿಷ್ಣು ಸೇವಾ ಸಮಿತಿ ನಿರ್ಮಿಸಿರುವ ವಿಷ್ಣುವರ್ಧನ್ ಅವರ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಚಿತ್ರ ರಂಗಕ್ಕೆ ಸ್ಫೂರ್ತಿಯಾಗಿದ್ದರು ಎಂದು ಸ್ಮರಿಸಿದರು. ನಿರ್ದೇಶಕ, ನಟ ಎಸ್.ನಾರಾಯಣ್ ಮಾತನಾಡಿ, ಜೀವನೋತ್ಸಾಹ ಕಳೆದುಕೊಂಡವರು ವಿಷ್ಣುವರ್ಧನ್ ಅವರನ್ನು ನೋಡಿದರೆ, ಮಾತನಾಡಿದರೆ ಚೈತನ್ಯ ಮರಳಿ ಬರುತ್ತಿತ್ತು ಎಂದು ಸ್ವ ಅನುಭವ ಹಂಚಿಕೊಂಡರು. ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಹೋಗುವಾಗ ವೀರಪ್ಪ ನಾಯಕ ಸಿನೆಮಾ ನೋಡಿ ಸ್ಪರ್ಧೆಯಲ್ಲಿ ಜಯಗಳಿಸಿ ಮರಳಿದ್ದನ್ನು ಸ್ಮರಿಸಿಕೊಂಡರು. ಕನ್ನಡದ ಕಲಾವಿದರಿಗೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಪ್ರಶಸ್ತಿ ಗೌರವಕೊಡಿಸುವಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಿಷಾದಿಸಿದರು. ನಟ ಅನಿರುದ್ಧ್, ಚಿತ್ರ ಸಾಹಿತಿ ವಿ.ನಾಗೇಂದ್ರಪ್ರಸಾದ್, ಮಾಜಿ ಶಾಸಕ ನಾಗರಾಜು, ಉದ್ಯಮಿ ಗೋವೇನಹಳ್ಳಿ ಶಿವಣ್ಣ, ಸಮಿತಿಯ ಅಧ್ಯಕ್ಷ ವಿ.ಕುಮಾರ್ ಇದ್ದರು. ಕಾರ್ಯಕ್ರಮದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸಂಗ್ರಹವಾದ 50 ಯುನಿಟ್ ರಕ್ತವನ್ನು ಬೆಂಗಳೂರು ರಕ್ತ ನಿಧಿಗೆ ಹಸ್ತಾಂತರಿಸಲಾಯಿತು.ಆಲಾಪ್ ಎಂಟರ್ಟೈನರ್ಸ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮುನ್ನ ಜನಪದ ಕಲಾ ಪ್ರದರ್ಶನಗಳೊಂದಿಗೆ ವಿಷ್ಣುವರ್ಧನ್ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement