ಸದಾನಂದಗೌಡರ ಸಕಾರಾತ್ಮಕ ಸ್ಪಂದನೆ
ರಾಮನಗರ: ಬೆಂಗಳೂರು-ರಾಮನಗರ ನಡುವೆ ಪ್ರಾರಂಭಿಸಲಿರುವ ಹೊಸ ರೈಲುಗಾಡಿಯ ಸಂಚಾರವನ್ನು ಚನ್ನಪಟ್ಟಣದವರೆಗೆ ವಿಸ್ತರಿಸುವಂತೆ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಈಗಾಗಲೇ ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಇಂಟರ್ಸಿಟಿ ಮಾದರಿಯಲ್ಲಿ ಹೊಸ ರೈಲುಗಾಡಿಗಳ ಸಂಚಾರಕ್ಕೆ ಬಜೆಟ್ಗೂ ಮೊದಲೇ ಬೇಡಿಕೆ ಸಲ್ಲಿಸಲಾಗಿತ್ತು. ಭಾಗಶಃ ಬೇಡಿಕೆಗಳು ಈಡೇರಿವೆ. ಮೈಸೂರು-ಚೆನ್ನೈ, ಬೆಂಗಳೂರು-ಮಂಡ್ಯ ನಡುವಿನ ಹೊಸ ಎಕ್ಸ್ಪ್ರೆಸ್ ರೈಲು ಗಾಡಿಗಳಿಗೆ ರಾಮನಗರ, ಚನ್ನಪಟ್ಟಣದಲ್ಲೂ ನಿಲುಗಡೆ ನೀಡಬೇಕೆಂದು ಕೋರಿಕೆ ಸಲ್ಲಿಸಲಾಗುವುದು ಎಂದು ಅವರು ಕನ್ನಡಪ್ರಭಕ್ಕೆ ತಿಳಿಸಿದರು.
ಸದಾನಂದಗೌಡರು ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ ಎಂದರು.