ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಾವರೆಕೆರೆಯಲ್ಲಿ ನಂದಗುಡಿ ಪೊಲೀಸರ ಗ್ರಾಮ ವಾಸ್ತವ್ಯ: ಸಮಸ್ಯೆಗಳ ಅನಾವರಣ

Rashmi Kasaragodu
Updated On : 11 Jul 2014, 1:44 am

ಸೂಲಿಬೆಲೆ: ಸ್ವಾಮಿ..ರಾತ್ರಿ ವೇಳೆ ಬೀದಿ ದೀಪವಿಲ್ಲದ ಕಾರಣ, ಕಳ್ಳರ ಕಾಟ ಜಾಸ್ತಿಯಾಗಿದೆ.ಅಲ್ಲದೇ ಅನೈತಿಕ ಚಟುವಟಿಕೆಗಳಿಗೆ ದಾರಿಯಾಗಿ ಪುಂಡರ ಹಾವಳಿ ಮಿತಿ ಮೀರಿದೆ.  ಇದಕ್ಕೊಂದು ಮುಕ್ತಿ ಕಾಣಸಿ. ಜನರು ನೆಮ್ಮದಿಯಿಂದ ಇರುವಂತೆ  ಪೊಲೀಸರು ಕ್ರಮ ಕೈಗೊಂಡರೆ ಉಪಕಾರವಾಗುತ್ತದೆ.   ಹೊಸಕೋಟೆ ತಾಲೂಕಿನ  ತಾವರೆಕೆರೆ ಗ್ರಾಮದಲ್ಲಿ ನಂದಗುಡಿ ಪೊಲೀಸರಿಂದ ಬುಧವಾರ ರಾತ್ರಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ತಮ್ಮೂರಿನಲ್ಲಿ ಎದುರಾಗಿರುವ ಸಮಸ್ಯೆಗಳನ್ನು  ಕಾನೂನ್ಮಕವಾಗಿ ಬಗೆಹರಿಸಿ ಅನುಕೂಲ ಮಾಡುವಂತೆ ಪೊಲೀಸ್ ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿದರು. ಇಷ್ಟು ಮಾತ್ರವಲ್ಲ, ಸಂಜೆ 7 ಗಂಟೆ ನಂತರ ತಾವರೆಕೆರೆ ಗ್ರಾಮದಿಂದ ಹಾದು ಹೋಗಿರುವ ರಾ-ಹೆದ್ದಾರಿಯಲ್ಲಿ ಸಾಗುವ ಬಸ್‌ಗಳು ತಾವರೆಕೆರ ಬಳಿ ಸ್ಟಾಪ್ ಇಲ್ಲ ಎಂದು ನಿಲ್ಲಿಸದೆ  ಜನರಿಗೆ ತೊಂದರೆ ಕೊಡುತ್ತಿದ್ದಾರೆ.ಇದಕ್ಕೆ ಪರಿಹಾರ ಕೊಡಿಸಿ ಸ್ವಾಮಿ..ಇಂಥ ಹತ್ತಾರು ಸಮಸ್ಯೆಗಳನ್ನು ಗ್ರಾಮಸ್ಥರು ಪೊಲೀಸರ ಮುಂದೆ ತೆರೆದಿಟ್ಟರು.
ಇದಕ್ಕೆ ಸ್ಪಂದಿಸಿದ ನಂದಗುಡಿ ವೃತ್ತ  ನಿರೀಕ್ಷಕ ತಿಮ್ಮಯ್ಯ, ಪೊಲೀಸ್ ಇಲಾಖೆ ವ್ಯಾಪ್ತಿಗೆ ಒಳಪಡುವ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಇತರೆ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಕಾನೂನು ಬಾಹಿರ ಚಟುವಟಿಕೆಗಳು ಕಂಡ ಬಂದರೇ ಕೂಡಲೇ ಜನರು ಪೊಲೀಸರಿಗೆ ಮಾಹಿತಿ ನೀಡಿ ಅಪರಾಧ ಕೃತ್ಯಗಳು ನಡೆಯದಂತೆ ತಡೆಯಬೇಕಾದ ಕರ್ತವ್ಯ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement