ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಭವಿಷ್ಯ ರೂಪಿಸುವ ವಿಷಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿ'

Rashmi Kasaragodu
Updated On : 11 Jul 2014, 1:44 am

ಕನಕಪುರ:  ಜಾಗತೀಕರಣದ ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸುವ ವಿಷಯಗಳನ್ನು ಅಧ್ಯಯನ ಮಾಡಬೇಕು, ನಗರೀಕರಣದ ಪೈಪೋಟಿ ಎದುರಿಸಿ ಸ್ಫರ್ಧಾತ್ಮಕವಾಗಿ ಹೋರಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಎನ್. ಡಿ. ಸುರೇಶ್ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಕೋಡಿಹಳ್ಳಿಯ ಶ್ರೀಮತಿ ಗೌರಮ್ಮಕೆಂಪೇಗೌಡ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಪಠ್ಯಕ್ರಮ ಆಯ್ಕೆ ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ನೂತನ ಪ್ರಾಂಶುಪಾಲೆ ಡಾ. ಜೆ.ಸಿ. ರಾಧಾ ಅಧ್ಯಕ್ಷತೆ ವಹಿಸಿದ್ದರು.  ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ವಿಭಾಗವು ಅತಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿದೆ, ವ್ಯಾಸಂಗದೊಂದಿಗೆ ವಿದ್ಯಾರ್ಥಿಗಳು ಬೆರಳಚ್ಚು, ಗಣಕ, ಟ್ಯಾಲಿ ಮೊದಲಾದವುಗಳನ್ನು ಕಲಿತರೆ ಉತ್ತಮ ಆಯ್ಕೆಗಳು ದೊರೆಯುತ್ತವೆ, ಲೆಕ್ಕಶಾಸ್ತ್ರದೊಂದಿಗೆ ಲೆಕ್ಕತಪಾಸಣೆ ಚಾರ್ಟರ್ಡ್ ಅಕೌಂಟ್ಸ್‌ಗಳ ಬಗ್ಗೆಯೂ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಪ್ರಾಂಶುಪಾಲೆ ಡಾ. ಜೆ. ಸಿ. ರಾಧಾ ನುಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ನೂರ್ ಫಾತಿಮಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಕುಬೇರನಾಯ್ಕ, ಡಾ. ಕೃಷ್ಣಮೂರ್ತಿ, ಪ್ರೊ.ಅನಿಲ್, ಪ್ರೊ.ರತ್ನಮ್ಮ, ಪ್ರೊ. ಪುಷ್ಪಲತಾರೆಡ್ಡಿ ಪಾಲ್ಗೊಂಡಿದ್ದರು. ಪ್ರೊ. ಮರ್ಸಿ ವಿಕ್ಟೋರಿಯಾ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement