ವಕೀಲೆಗೆ ಲೈಂಗಿಕ ಕಿರುಕುಳ: ವ್ಯಕ್ತಿ ಬಂಧನ
ಚನ್ನಪಟ್ಟಣ: ರಕ್ತ ಪರೀಕ್ಷೆಗೆ ಬಂದ ವಕೀಲೆಯೊಂದಿಗೆ ಪ್ರಯೋಗಾಲಯ ತಂತ್ರಜ್ಞ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಮಹಿಳೆಯ ಸಂಬಂಧಿಕರು ಆತನ ಮೇಲೆ ಹಲ್ಲೆ ನಡೆಸಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಲ್ಲಿನ ನಾಲ್ಕನೇ ಅಡ್ಡರಸ್ತೆಯಲ್ಲಿ ನಡೆದಿದೆ.
ಇಲ್ಲಿನ ಪ್ರಗತಿ ಡಯಾಗ್ನೋಸ್ಟಿಕ್ನ ವಿನೋದ್ ಬಂಧಿತ ಆರೋಪಿ. ರಕ್ತಪರೀಕ್ಷೆಗೆ ಬಂದಾಗ ನನ್ನ ಜತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ವಕೀಲೆ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಕ್ರಮ ಕೈಗೊಂಡಿದ್ದಾರೆ.