ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೇತನ ನೀಡದೆ ಕಾರ್ಖಾನೆ ಎತ್ತಂಗಡಿ

Rashmi Kasaragodu
Updated On : 11 Jul 2014, 1:40 am

ದೊಡ್ಡಬಳ್ಳಾಪುರ: ಇಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಪಾರ್ಕ್‌ನ ಗೌರ ಫ್ಯಾಷನ್ ಗಾರ್ಮೆಂಟ್ ಎತ್ತಂಗಡಿಯಾಗಿದ್ದು ಸುಮಾರು 40ಕ್ಕೂ ಹೆಚ್ಚು ಕಾರ್ಮಿಕರು ಕಂಗಾಲಾಗಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿರುವ ಕಾರ್ಮಿಕರು ಕರವೇ ಮುಖಂಡರೊಂದಿಗೆ ಸೇರಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕಾರ್ಖಾನೆ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಕಳೆದ 1 ವರ್ಷದ ಹಿಂದೆ ಆರಂಭವಾಗಿತ್ತು. ಆದರೆ, ಈಗ ಯಾವುದೇ ಮಾಹಿತಿ ಕೊಡದೆ ಕಾರ್ಖಾನೆ ಮುಚ್ಚಿ ಕಾರ್ಮಿಕರಿಗೆ ಒಂದು ತಿಂಗಳ ಸಂಬಳ(ಈ ತಿಂಗಳ)ವನ್ನೂ ಕೂಡದೆ ವಂಚಿಸಿದ್ದಾರೆ. ಕಾರ್ಮಿಕರಿಗೆ ಸುಮಾರು ರು. 5 ಲಕ್ಷ ವೇತನ ಬಾಕಿ ಕೊಡಬೇಕು. ಕಾರ್ಖಾನೆ ಮುಚ್ಚುವ ಮುನ್ನ ಕಾರ್ಮಿಕರಿಗೆ ತಿಳಿವಳಿಕೆ ಪತ್ರ ನೀಡಬೇಕು. ಅದನ್ನೂ ಕೊಟ್ಟಿಲ್ಲ. ಏಕಾಏಕಿ ಈ ರೀತಿ ಮಾಡಿರುವುದರಿಂದ ಅನೇಕ ಕಾರ್ಮಿಕರ ಬದುಕು ದುಸ್ತರವಾಗಿದೆ. ಮೂಲಗಳ ಪ್ರಕಾರ ಒಂದು ತಿಂಗಳ ಹಿಂದೆಯೇ ಕೆಲಸ ನಿಲ್ಲಿಸಿದ್ದು, ವೇತನವನ್ನೂ ಪಾವತಿಸಿಲ್ಲ ಎಂಬುದು ಕಾರ್ಮಿಕರ ದೂರು.
ಸೂಕ್ತ ಕ್ರಮ: ಈ ಕುರಿತು ಪ್ರತಿಕ್ರಿಯಿಸಿರುವ ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ವೆಂಕಟೇಶ್, ಗೌರ ಫ್ಯಾಷನ್ಸ್ ಗಾರ್ಮೆಂಟ್ ಕಾರ್ಮಿಕರು ಈವರೆಗೆ ದೂರು ಕೊಟ್ಟಿರಲಿಲ್ಲ. ಈಗ ದೂರಿತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಹೋರಾಟಕ್ಕೆ ಸೈ:  ಕಾರ್ಮಿಕರಿಗೆ ಆಗಿರುವ ಅನ್ಯಾ ಯದ ವಿರುದ್ಧ ಹೋರಾಟ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧವಿದೆ. ಕಾರ್ಮಿಕರಿಗೆ ನ್ಯಾಯ ದೊರಕಬೇಕು. ನ್ಯಾಯ ಮರೀಚಿಕೆಯಾದಲ್ಲಿ ಸಂಬಂಧಪಟ್ಟ ಇಲಾಖೆಗಳು ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ಬೀದಿಗಿಳಿಯುವುದು ಅನಿವಾರ್ಯವಾದೀತು ಎಂದು ಅಧ್ಯಕ್ಷ ರಾಜಘಟ್ಟ ರವಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement