ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಿ

Rashmi Kasaragodu
Updated On : 12 Jul 2014, 1:17 am

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 197ನೇ ಉಚಿತ ಕಣ್ಣಿನ ಪರೀಕ್ಷೆ ಮತ್ತು ತಪಾಸಣೆ ಹಾಗೂ ಐಓಎಲ್ ಅಳವಡಿಕೆ ಶಿಬಿರ ಲಯನ್ಸ್ ಭವನದಲ್ಲಿ ನಡೆಯಿತು.  
ಎಂ.ಎಸ್.ರಾಮಣ್ಣ ಸ್ಮರಣಾರ್ಥ ಮೈಸೂರು ಟಿ.ರೇಣುಕಮ್ಮ ಕುಟುಂಬ ಪ್ರಾಯೋಜಿಸಿದ್ದ ಶಿಬಿರವನ್ನು ಮೈಸೂರು ಟಿ.ರೇಣುಕಮ್ಮ ರಾಮಣ್ಣ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಎಂ.ಶಂಕರನಾಯಕ್ ಅವರು ಮಾತನಾಡಿ, ಜಗತ್ತನ್ನು ನೋಡುವ ಮಹತ್ವದ ದೃಷ್ಟಿ ನೀಡುವ ಲಯನ್ಸ್ ಚಿಂತನೆ ಗಮನಾರ್ಹ. ಅದರಲ್ಲೂ 197 ತಿಂಗಳುಗಳ ಕಾಲ ಸತತವಾಗಿ ನಡೆದುಕೊಂಡು ಬಂದಿರುವ ಶಿಬಿರದ ಯಶಸ್ಸು ಹಾಗೂ ಕಣ್ಣಿನ ಚಿಕಿತ್ಸಾ ವಿಚಾರದಲ್ಲಿ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ನ ಸಾಧನೆ ಗಣನೀಯ. ಈ ಬಗೆಯ ಶಿಬಿರಗಳಿಂದ ಜನರಿಗೆ ಮಹತ್ವದ ಉಪಯೋಗ ಸಾಧ್ಯವಿದೆ. ಲಯನ್ಸ್ ಸಾಮಾಜಿಕ ಸೇವೆಯಲ್ಲಿ ಗಣನೀಯ ಹೆಸರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸೇವಾ ಕಾರ್ಯಗಳನ್ನು ವಿಸ್ತರಿಸಿಕೊಂಡು ಬಂದಿದೆ ಎಂದು ವಿವರಿಸಿದರು.
ಇಂದಿನ ಸಂದರ್ಭದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಸಂಘಟನೆಗಳು ಮೊದಲ ಆದ್ಯತೆ ನೀಡಬೇಕು. ಆಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಯಾವಾಗಲೂ ಸೇವೆ ನಿಸ್ವಾರ್ಥವಾಗಿರಬೇಕು. ಆಗ ಮಾತ್ರ ಸೇವೆಯ ಪರಿಣಾಮ ಹೆಚ್ಚು. ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಸುಸಜ್ಜಿತ  ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದಲ್ಲಿ ಗಮನ ಕೇಂದ್ರೀಕರಿಸಿರುವುದು ಶ್ಲಾಘನೀಯ ಎಂದರು.
ಶಿಬಿರದಲ್ಲಿ ಒಟ್ಟು 70ಕ್ಕೂ ಹೆಚ್ಚು ರೋಗಿಗಳಿಗೆ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ನಡೆಸಿ ಐಓಎಲ್ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಪಿ.ಸಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚೂಡಿನಾಥ್, ಖಜಾಂಚಿ ಎಸ್. ನಟರಾಜ್, ಚಾರಿಟೀಸ್ ಟ್ರಸ್ಟ್ನ ಕೆ.ಎಂ.ಹನುಮಂತರಾಯಪ್ಪ, ಕಣ್ಣಿನ ಸೇವಾ ಕೇಂದ್ರದ ಅಧ್ಯಕ್ಷ ಪಿ.ಸಿ.ಪುಟ್ಟರುದ್ರಪ್ಪ ಮತ್ತಿತರರು ಭಾಗವಹಿಸಿದ್ದರು. ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಾಸ್ಪತ್ರೆ, ಅಕ್ಷಿಜೋಡಣಾ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಲಯನೆಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶಿಬಿರ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement