ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನಕಪುರ ಪಟ್ಟಣದ ಒಳಚರಂಡಿ ಕಾಮಗಾರಿ ಮುಗಿಸಲು ಆಗ್ರಹ

Rashmi Kasaragodu
Updated On : 13 Jul 2014, 1:55 am

ಕನಕಪುರ:  ಒಂದೂವರೆ ದಶಕಗಳಿಂದ ಪೂರ್ಣಗೊಳ್ಳದೆ ಸಾರ್ವಜನಿಕರ ಬಗಲ ಮುಳ್ಳಾಗಿ ಕಾಡುತ್ತಿರುವ ಕನಕಪುರ ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು ಜನರ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಒಳಚರಂಡಿ ಮಂಡಳಿಯ ಮುಖ್ಯಅಭಿಯಂತರರು, ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ, ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಎಇಇ ಮಂಜುನಾಥ್, ಸಹಾಯಕ ಅಭಿಯಂತರೆ ಗಾಯಿತ್ರಿ, ಪುರಸಭಾಸದಸ್ಯ ಕೆ.ಎನ್.ಶಿವಕುಮಾರ್, ರಾಮಚಂದ್ರ ಮೊದಲಾದವರು ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಕನಕಪುರ ಪಟ್ಟಣದ ಒಳಚರಂಡಿ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು ಬಾಯಿತೆರೆದ ಮ್ಯಾನ್‌ಹೋಲ್‌ಗಳು, ಸಂಪರ್ಕ ಕಡಿತ, ಜಾಲವನ್ನು ತುಂಡರಿಸಿ ಮಲಿನ ನೀರನ್ನು ಅರ್ಕಾವತಿ ನದಿಗೆ ನೇರವಾಗಿ ಬಿಟ್ಟಿರುವುದು, ಕರಡೀಗುಡ್ಡೆಯ ಮೇಲೆ ಶುದ್ಧೀಕರಣ ಸ್ಥಾವರ ಸ್ಥಾಪಿಸಿರುವುದು ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದು ಅವ್ಯವಸ್ಥೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ಮುಖ್ಯಾಧಿಕಾರಿ ಮಾಯಣ್ಣಗೌಡ ಮಾತನಾಡಿ, ನಗರಸಭೆಯಾಗಿ ಪರಿವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೇಗನೇ ಕಾಮಗಾರಿ ಮುಕ್ತಾಯವಾಗುವ ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement