ಕಾಯಿಲೆಯಿಂದ ಸಾವಿಗೀಡಾದ ಮಂಗನಿಗೆ ಅಂತ್ಯ ಸಂಸ್ಕಾರ
ಚನ್ನಪಟ್ಟಣ: ಕಾಯಿಲೆಯಿಂದ ಸಾವಿಗೀಡಾದ ಮಂಗನಿಗೆ ಅಂತ್ಯ ಸಂಸ್ಕಾರ ನಡೆಸುವ ಜತೆಗೆ ಕೋತಿಯ ತಿಥಿ ಕಾರ್ಯವನ್ನು ಮಾಡುವ ಮೂಲಕ ತಾಲೂಕಿನ ರಾಂಪುರಗ್ರಾಮಸ್ಥರು ಮಾನವೀಯತೆ ಮೆರೆದರು. ಗ್ರಾಮದಲ್ಲಿ ಕಳೆದ 2ವರ್ಷದಿಂದ ಇದ್ದ ಹೆಣ್ಣು ಕೋತಿಯೊಂದು ಅನಾರೋಗ್ಯದಿಂದ ಸಾವಿಗೀಡಾಗಿತ್ತು. ಸತ್ತ ಕೋತಿಯ ಅಂತ್ಯ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ ಗ್ರಾಮಸ್ಥರು ಇದೀಗ ಗ್ರಾಮದಲ್ಲಿ ಕೋತಿಯ ಉತ್ತರ ಕ್ರಿಯಾ ಕಾರ್ಯವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಸಾವಿರಾರು ಮಂದಿ ಪಾಲ್ಗೊಂಡಿದ್ದ ವಿಶೇಷ ಎನಿಸಿತ್ತು. ತಾಯಿ ಕೋತಿಯ ಸಾವಿನಿಂದ ತಬ್ಬಲಿಯಾಗಿರುವ ಮರಿ ಕೋತಿಗೆ ಗ್ರಾಮಸ್ಥರು ಹಾಲುಣಿಸಿ ಪೋಷಿಸುತ್ತಿದ್ದಾರೆ. ಜಯಕರ್ನಾಟಕ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್, ಕುದುರೆ ಶಿವರಾಜು, ಆರ್.ಕುಮಾರ್, ಆರ್.ಟಿ.ಮಧುಸೂಧನ್ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.