ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜನಪರ ಕಾಳಜಿ ವಹಿಸಿ ಅಧಿಕಾರ ನಡೆಸಿ: ಬಚ್ಚೇಗೌಡ

Rashmi Kasaragodu
Updated On : 13 Jul 2014, 1:55 am

ಸೂಲಿಬೆಲೆ: ಸಿಕ್ಕದ ಅಧಿಕಾರವನ್ನು ಬಳಿಸಿಕೊಂಡು ಜನಪರ ಕಾಳಜಿಯಿಂದ ಅಭಿವೃದ್ಧಿ ಕೆಲಸಗಳನ್ನು ನಿರ್ವಹಣಿ ಮಾಡುವಂತೆ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡರು ಹೊಸಕೋಟೆಯ ನೂತನ ತಾಪಂ ಅಧ್ಯಕ್ಷರಿಗೆ ಸಲಹೆ ನೀಡಿದ್ದಾರೆ. ಹೊಸಕೋಟೆ ತಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಬಿಜೆಪಿಯ ಮಂಜುಳಾ ಡಿ.ಟಿ. ವೆಂಕಟೇಶ ಹಾಗೂ ಉಪಾಧ್ಯಕ್ಷೆ ಛಾಯ ರಾಮೇಗೌಡ ಅವರನ್ನು ಅಭಿನಂದಿಸಿ ಮಾತನಾಡಿದರು. ಅಧಿಕಾರ ಎಂಬುದು ಶಾಶ್ವತವಲ್ಲ. ಸಿಕ್ಕ ಅಧಿಕಾರವನ್ನು ಸಮರ್ಥವಾಗಿ ಬಳಿಸಿಕೊಂಡು ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುವತ್ತ ಆಸಕ್ತಿಯನ್ನು ತೋರಬೇಕು. ಕ್ಷೇತ್ರದ ಜನರು ಬಿಜೆಪಿ ನಾಯಕರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಇದನ್ನು ಉಳಿಸಿಕೊಳ್ಳಿ ಎಂದರು.


ಮದುವೆಗೆ ಒಲ್ಲೆ ಎಂದ ಬಾಲಕಿ ಅಪಹರಿಸಿದ ವ್ಯಕ್ತಿ ಬಂಧನ


ಕನಕಪುರ: ಮದುವೆಯಾಗಲು ನಿರಾಕರಿಸಿದ ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯನ್ನು ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ತಿಗಳರ ಹೊಸಹಳ್ಳಿ ಗ್ರಾಮದ ಹಣ್ಣಿನ ವ್ಯಾಪಾರಿ ಗುರುದೇವ್ ಅವರ ಪುತ್ರ 19 ವರ್ಷದ ಪ್ರಮೋದ್ ಎಂದು ತಿಳಿದು ಬಂದಿದೆ.
ಟಿ.ಹೊಸಹಳ್ಳಿ ಗ್ರಾಮದ ಯುವತಿಯ ಜೊತೆಗೆ ಸಲುಗೆಯಿಂದ ಮಾತನಾಡುತ್ತಿದ್ದ ಪ್ರಮೋದ್, ಆಕೆಯನ್ನೇ ಮದುವೆಯಾಗುವುದಾಗಿ ಹೇಳುತ್ತಿದ್ದನು. ಯುವತಿಯು ಇತ್ತೀಚೆಗೆ ಆತನೊಂದಿಗೆ ಮದುವೆಯಾಗಲು ನಿರಾಕರಿಸಿದ್ದರಿಂದ ಜುಲೈ 6 ರಂದು ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಚನ್ನಪಟ್ಟಣದ ಮಾದಾಪುರದಲ್ಲಿ ಇರಿಸಿದ್ದ ಎಂದು ಯುವತಿಯು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಆರೋಪಿ ಪ್ರಮೋದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು
ವೈದ್ಯಕೀಯ ಪರೀಕ್ಷೆ ನಂತರ ಪೋಷಕರಿಗೆ ಒಪ್ಪಿಸಲಾಗಿದೆ. ಉಪನಿರೀಕ್ಷಕ ಮಹದೇವಸ್ವಾಮಿ ದೂರುದಾಖಲಿಸಿ ತನಿಖೆ ನಡೆಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement