ತೋಟಗಾರಿಕೆ ಬೆಳೆಗಳ ನಷ್ಟದ ಅಂದಾಜು 17ರಂದು
ಚನ್ನಪಟ್ಟಣ: ತಾಲೂಕಿನಲ್ಲಿ ಬರದಿಂದ 2013-14ನೇ ಸಾಲಿನಲ್ಲಿ ಆಗಿರುವ ತೋಟಗಾರಿಕಾ ಬೆಳೆಗಳ ನಷ್ಟದ ಅಂದಾಜು ಕಾರ್ಯಕ್ರಮವನ್ನು ಜು.17 ರಂದು ತಾಲೂಕಿನ ಮೂರು ಹೋಬಳಿ ವ್ಯಾಪ್ತಿಯಲ್ಲಿ ನಡೆಸಲಿರುವುದಾಗಿ ತಹಸೀಲ್ದಾರ್ ಅರುಣ ಪ್ರಭ ತಿಳಿಸಿದ್ದಾರೆ. ಅಂದು ಬೆಳಿಗೆ 10 ರಿಂದ ಮಧ್ಯಾಹ್ನ3 ಗಂಟೆವರೆಗೆ ಬೆಳೆ ನಷ್ಟದ ಅಂದಾಜು ನೋಂದಣಿ ನಡೆಯಲಿದ್ದು, ಗ್ರಾಮಲೆಕ್ಕಿಗರು, ರಜಸ್ವ ನಿರೀಕ್ಷಕರು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಗ್ರಾ.ಪಂ ಮಟ್ಟದಲ್ಲಿ ಹಾಜರಿದ್ದು ಬೆಳೆನಷ್ಟದ ನೋಂದಣಿ ಮಾಡಿಕೊಳ್ಳಲಿದ್ದಾರೆ. ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಹೊಂದಿರುವ ರೈತರು ನೋಂದಣಿ ಮಾಡಿಸುವಂತೆ ತಹಸೀಲ್ದಾರ್ ಮನವಿ ಮಾಡಿದ್ದಾರೆ. ತಾಲೂಕಿನ ಕಂದಾಯ ಇಲಾಖೆ ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾ.ಪಂ ಕಚೇರಿಯಲ್ಲಿ ಕುಳಿತು ರೈತರಿಂದ ಬೆಳೆ ನಷ್ಟದ ಮಾಹಿತಿ ಪಡೆದು ನೋಂದಣಿ ಮಾಡಿಕೊಳ್ಳುವಂತೆ ಆದೇಶಿಸಿದರುವ ತಹಸೀಲ್ದಾರರು ನೋಂದಣಿ ಕಾರ್ಯ ಮುಗಿದ ಬಳಿಕ ವರದಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ.