ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲಕ್ಷ ಶೌಚಾಲಯ ನಿರ್ಮಿಸುವ ಗುರಿ

Vishwanath S
Updated On : 17 Jul 2014, 1:03 am

ಮಾಗಡಿ:  ಜಿಲ್ಲೆಯಲ್ಲಿ 1 ಲಕ್ಷ ಶೌಚಾಲಯ ನಿರ್ಮಿಸಲು ಗುರಿ ಹೊಂದಿದ್ದು, ಕಾರ್ಯೋನ್ಮುಖರಾಗಿದ್ದೇವೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮುಡಿದರು.
ಅವರು ತಾಲೂಕಿನ ಸೋಲೂರು ಹೋಬಳಿ ಲಕ್ಕೇನಹಳ್ಳಿ  ಗ್ರಾಮದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಶೌಚಾಲಯ ನಿರ್ಮಾಣ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಆಂದೋಲನ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ. ಪ್ರಮುಖವಾಗಿ ಅಂಗವಿಕಲರು, ವಿಧವೆಯರು ಮತ್ತು ಎಲ್ಲಾ ಜನತೆ ಆರೋಗ್ಯದಿಂದ ಬದುಕು ನಡೆಸಬೇಕು ಎಂಬ ಉದ್ದೇಶವನ್ನು ಹೊಂದಲಾಗಿದೆ. ಬಯಲು ಶೌಚಾಲಯದಿಂದ ಗ್ರಾಮಗಳಲ್ಲಿ ರೋಗರುಜಿನುಗಳು ಕಾಣಿಸಿಕೊಂಡುಜನರಿಗೆ ತೊಂದರೆ ಆಗುತ್ತದೆ ಎಂದರು.
 ವಿವಿಧ ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿಯೂ ಶೌಚಾಲಯ ನಿರ್ಮಾಣ ಅಭಿಯಾನಕ್ಕೆ ಬಳಸಿಕೊಂಡು ಜನಜಾಗೃತಿಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳು ಬಯಲು ಮುಕ್ತ ಶೌಚಾಲಯಕ್ಕೆ ಪಣ ತೊಟ್ಟಿರುವುದಾಗಿ ಸಿಇಓ ಡಾ.ಎಂ.ವಿ. ವೆಂಕಟೇಶ್ ವಿವರಿಸಿದರು.      
ಸೋಲೂರು ಹೋಬಳಿ ಜಿಲ್ಲಾ ಪಂಚಾಯ್ತಿ ಸದಸ್ಯ ರಂಗಸ್ವಾಮಿ ಮಾತನಾಡಿ ಸಂಘ, ಸಂಸ್ಥೆಗಳಿಗೆ ಈಗಾಗಲೇ ಜಿ.ಪಂ. ವತಿಯಿಂದ ತರಬೇತಿ ನೀಡಿದ್ದು, ಪ್ರತಿ ಕುಟುಂಬವೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೆಪಿಸಲಿದ್ದಾರೆ. ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳದ ಕೊರತೆ ಇರುವವರಿಗೆ ಗ್ರಾಮ ತಾಣಗಳಲ್ಲಿ ಸಾಮೂಹಿಕ ಶೌಚಾಲಯ ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ. ಎಂದು ತಿಳಿಸಿದರು.
ಲಕ್ಕೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಲುವಯ್ಯ ಮಾತನಾಡಿದರು. ತಾ.ಪಂ. ಸದಸ್ಯ ಶಂಕರಪ್ಪ, ಲಕ್ಕೇನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ನಾರಾಯಣಪ್ಪ, ಸದಸ್ಯರಾದ ಎನ್. ಗಂಗರಾಜು, ಲಲಿತಮ್ಮ, ಶೋಭಾ, ಪಾರ್ವತಮ್ಮ, ಸುವರ್ಣ, ಲಿಂಗೇಗೌಡ, ನವಯುಗ ರಮೇಶ್, ಗಂಗರಾಜು, ಪಿಡಿಒ ದಿವ್ಯಾ, ಕಾರ್ಯದರ್ಶಿ ವೆಂಕಟೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement