ನಿಯಂತ್ರಣ ತಪ್ಪಿ ಕಾರು ಪಲ್ಟಿ: ವ್ಯಾಪಾರಿ ಸಾವು
ಸೂಲಿಬೆಲೆ: ಚಿಂತಾಮಣಿ, ಹೊಸಕೋಟೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟಾಟಾ ಇಂಡಿಕಾ ಕಾರೊಂದು ಪಲ್ಟಿ ಹೊಡೆದು ವ್ಯಾಪಾರಸ್ಥರೊಬ್ಬರು ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.ಮೃತ ವ್ಯಕ್ತಿಯನ್ನು ರವಿ(32) ಹಾಗೂ ಗಾಯಗೊಂಡವರನ್ನು ರಾಮಾಂಜಿನಿ, ಪಾಂಡುರಂಗ ಎಂದು ಪೊಲೀಸರು ತಿಳಿಸಿದ್ದಾರೆ.ಚಿಂತಾಮಣಿ ತಾಲೂಕಿನ ದೊಡ್ಡನತಿ ಗ್ರಾಮದ ನಿವಾಸಿಯಾಗಿರುವ ರವಿ(32) ಚಿಂತಾಮಣಿಯಲ್ಲಿ ಹಾರ್ಡ್ವೇರ್ ಅಂಗಡಿ ಹೊಂದಿದ್ದು, ಬುಧವಾರ ತನ್ನ ಸ್ನೇಹಿತರ ಜೋತೆ ಅಂಗಡಿ ಸಾಮಾಗ್ರಿಗಳನ್ನು ಖರೀದಿಸಲೆಂದು ಬೆಂಗಳೂರಿಗೆ ಹೋಗಿ ಅಲ್ಲಿಂದ ವಾಪಸ್ ಚಿಂತಾಮಣಿಗೆ ಬರುವಾಗ ಕೆ.ಸತ್ಯವಾರದ ಬಳಿ ಅವಘಡ ಸಂಭವಿಸಿದೆ. ಸ್ಥಳೀಯರು ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ನಂದಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.