ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಂಬಾಕು ಮಾರಾಟ ಮಳಿಗೆಗಳ ಮೇಲೆ ದಾಳಿ: ಬ್ಲೂ ಬರ್ಗ್ ಸಂಸ್ಥೆ ಪ್ರತಿನಿಧಿ ಡಾ.ಚಂದ್ರಶೇಖರ್

Mainashree
Updated On : 26 Jul 2014, 10:47 am

ವಿಜಯಪುರ: ತಂಬಾಕು ನಿಯಂತ್ರಣ ಕಾಯ್ದೆ ಪ್ರಕಾರ ಯಾವುದೇ ತಂಬಾಕು ತಯಾರಕರು ಕಾನೂನು ಉಲ್ಲಂಘನೆ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬ್ಲೂ ಬರ್ಗ್ ಸಂಸ್ಥೆಯ ಪ್ರತಿನಿಧಿ ಡಾ.ಚಂದ್ರಶೇಖರ್ ತಿಳಿಸಿದರು.
 ಅವರು ಪಟ್ಟಣದ ಜನ ನಿಬಿಡ ಪ್ರದೇಶಗಳಲ್ಲಿ ಧೂಮಪಾನ ಮಾಡುವವರ ಹಾಗೂ ಗುಟ್ಕಾ ಪದಾರ್ಥಗಳನ್ನು ವ್ಯಾಪಾರ ಮಾಡುವ ಅಂಗಡಿಗಳ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿಗಳು ಹಾಗೂ ಬ್ಲೂ ಬರ್ಗ್ ಸಂಸ್ಥೆ ಪ್ರತಿನಿಧಿಗಳು, ಪೋಲಿಸ್ ಸಿಬ್ಬಂದಿ ಸಂಯುಕ್ತಾಶ್ರಯದಲ್ಲಿ ಧೀಡಿರ್ ದಾಳಿ ನಡೆಸಲಾಯಿತು. ಪಟ್ಟಣದಲ್ಲಿ ಲಕ್ಷ್ಮೀ ಬೀಡಿ ಮಾಲಿಕತ್ವದ ಪ್ರಚಾರಕ್ಕೆ ಬಳಸುತ್ತಿದ್ದ ಒಂದು ವಾಹನ, ಭಾಷಾ ಬೀಡಿ ಮಾಲಿಕತ್ವದ ಘಟಕಗಳ ಮೇಲೆ ದಾಳಿ ನಡೆಸಿ 11 ಲಕ್ಷ ಮೌಲ್ಯದ ಬೀಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧ ಹಾಗೂ ಬೀಡಿ, ಸೀಗರೇಟ್ ಮಾರುವ ಅಂಗಡಿಗಳ ಮುಂದೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ನಾಮಫಲಕ ಕಡ್ಡಾಯವಾಗಿ ಹಾಕಬೇಕು. ವಿಜಯಪುರ ಪಟ್ಟಣದಲ್ಲಿ ಬೀಡಿ ಜಾಹೀರಾತುಗಳ ಬಗ್ಗೆ ಗೋಡೆ ಮೇಲೆ ಬರಹಗಳಿವೆ ಇದನ್ನು ಶೀಘ್ರವೇ ತೆರವು ಗೊಳಿಸುವಂತೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ 16 ಮಂದಿಗೆ ದಂಡ ವಿಧಿಸಲಾಗಿದೆ. ಇದೇ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳಾದ ಡಾ.ಮಿನಂಪ್ರಸಾದ್, ಡಾ. ರಾಣಾಸಿಂಗ್, ಡಾ. ಗ್ಲಾಡಿಯೇಟಂಗ್, ಡಾ. ಅಜಿತ್, ಡಾ.ಮದನ್ ಷಾ ಮತ್ತು ಬ್ಲೂ ಬರ್ಗ್ ಸಂಸ್ಥೆಯ ಪ್ರತಿನಿಧಿಗಳು ವಿಜಯಪುರ ವೃತ್ತ ನಿರೀಕ್ಷಕರಾದ ಎಸ್. ಮಹೇಶ್ ಕುಮಾರ್ ಮತ್ತು ಉಪನಿರೀಕ್ಷಕ ಎಸ್. ಶಿವಕುಮಾರ್, ಪೊಲೀಸ್ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement