ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಾತ್ಕಾಲಿಕ ಪೋಷಣೆಗಾಗಿ ಸೋಲೂರಿನ ಸ್ನೇಹಾಲಯಕ್ಕೆ ಹೆಣ್ಣು ಮಗು

Rashmi Kasaragodu
Updated On : 1 Aug 2014, 1:38 am

ರಾಮನಗರ: ಚನ್ನಪಟ್ಟಣ ತಾಲೂಕಿನ ಬೋರಮಾರನಹಳ್ಳಿ ಲಂಬಾಣಿ ತಾಂಡದಲ್ಲಿ ಮೇ 28 ರಂದು 2 ತಿಂಗಳ ಹೆಣ್ಣು ಶಿಶು ಮಕ್ಕಳ ರಕ್ಷಣಾ ಘಟಕದ ಮುಖಾಂತರ ಮಕ್ಕಳ ಕಲ್ಯಾಣ ಸಮಿತಿಗೆ ಸಿಕ್ಕಿದೆ. ಮಗುವನ್ನು ಸೋಲೂರಿನ ಸ್ನೇಹಾಲಯ ಶಿಶುಮಂದಿರದಲ್ಲಿ ತಾತ್ಕಾಲಿಕ ರಕ್ಷಣೆ ಮತ್ತು ಪೋಷಣೆಗಾಗಿ ಸೇರಿಸಲಾಗಿದೆ.48 ಸೆಂ.ಮೀ. ಎತ್ತರ ಹಾಗೂ 5 ಕೆ.ಜಿ. ತೂಕವಿರುವ 4 ತಿಂಗಳು ಮಗು ಕಂದು ಬಣ್ಣವಿದ್ದು, ದೈಹಿಕ ಮತ್ತು ಮಾನಸಿಕ ಸ್ಥಿತಿ ಉತ್ತಮವಾಗಿದೆ. ಈ ಮಗುವಿನ ಪೋಷಕರು ಯಾರಾದರೂ ಇದ್ದಲ್ಲಿ ನಗರದ ಕಂದಾಯ ಭವನದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.  
ವಿವಿಧ ತರಬೇತಿಗೆ ಅರ್ಜಿ : ನಗರಸಭೆ ವ್ಯಾಪ್ತಿಯ 18 ರಿಂದ 35 ವರ್ಷದೊಳಗಿನ ಬಡತನ ರೇಖೆಗಿಂತ ಕೆಳಗಿರುವ ಅಭ್ಯರ್ಥಿಗಳಿಂದ ವಿವಿಧ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.ತರಬೇತಿ ಪಡೆಯಲು ಆಸಕ್ತ ಅಭ್ಯರ್ಥಿಗಳು ರಾಮನಗರ ನಗರಸಭಾ ಕಾರ್ಯಾಲಯದಿಂದ ನಿಗದಿತ ಅರ್ಜಿ ನಮೂನೆ ಪಡೆದು, ವಿದ್ಯಾರ್ಹತೆ ಪತ್ರ, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ,   ಆ.30 ರೊಳಗೆ ಕಚೇರಿಗೆ ಸಲ್ಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement