ಪತ್ರಿಕೆಗಳು ಸ್ಥಳೀಯ ಜ್ವಲಂತ ಸಮಸ್ಯೆಗಳ ಪರಿಹಾರದ ಚಿಲುಮೆ
ಆನೇಕಲ್ಲು: ಸ್ಥಳೀಯ ಪತ್ರಿಕೆಗಳು ಪ್ರಾದೇಶಿಕ ಸುದ್ದಿಗಳಿಗೆ ಆದ್ಯತೆ ನೀಡುವಂತೆಯೇ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಚಿಲುಮೆಯಂತೆ ಕೆಲಸ ಮಾಡುತ್ತವೆ. ಹಾಗೆಯೇ ಪತ್ರಿಕಾ ಸಂದಾಪದಕರು ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶಕರಾಗಬೇಕೆಂದು ಡಾ. ಸಿ. ಸೋಮಶೇಖರ್ ಕರೆ ನೀಡಿದ್ದಾರೆ.ಅವರು ತಾಲೂಕಿನ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ. ವೈ. ಚಿನ್ನಪ್ಪ ಚಿಕ್ಕಾಗಡೆ ಸಾರಥ್ಯದ ನನ್ನ ಬೆಂಗಳೂರು ಪತ್ರಿಕೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಸಿ. ರಾಮಚಂದ್ರ ಮಾತನಾಡಿ ಜಾಹಿರಾತುಗಳ ಬೆಂಬಲವಿಲ್ಲದೇ ಯಾವುದೇ ಪತ್ರಿಕೆ ಪ್ರಸಾರ ಕಾಣಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಗಳು ಹಲವಾರು ವಿಷಯಗಳ ಗ್ರಹಿಕೆ ಮತ್ತು ಪ್ರಚಾರದಿಂದ ಸ್ವಾವಲಂಬಿತನ ಕಾಪಾಡಿಕೊಳ್ಳುತ್ತದೆ ಎಂದರು. ಕೋಡಿಮಠ ಚಿತ್ರದುರ್ಗದ ಷಡಕ್ಷರ ಮುನಿಸ್ವಾಮಿಗಳು ಆಶೀರ್ವಚನ ನೀಡಿದರು. ಮಹೇಶ್ ಪತ್ರಿಕಾ ವಿಮರ್ಶೆ ದಾರಿ ವಿವರಿಸಿದರು. ಎಂ. ಕೃಷ್ಣಪ್ಪ ಭಾರತ್ ವಾಯ್ಸ್ ಪತ್ರಿಕೆಯ ಸಂಪಾದಕ ಮುನಿಯಪ್ಪ ಇದ್ದರು.