ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರತಿ ಅಂಗುಲ ನೆಲವು ಕನ್ನಡಿಗರದ್ದೇ: ಜಿಗಣಿ ಪುನೀತ್

Rashmi Kasaragodu
Updated On : 1 Aug 2014, 1:31 am

ಆನೇಕಲ್ಲು: ಬೆಳಗಾವಿ ಜಿಲ್ಲೆ ಕನ್ನಡ ನೆಲದ ಅವಿಭಾಜ್ಯ ಅಂಗವಾಗಿದ್ದು ಯಾವುದೇ ಕಾರಣಕ್ಕೂ ಮರಾಠಿಗರ ದುರಾಸೆಗೆ ರಾಜ್ಯ ಸರ್ಕಾರ ಸೊಪ್ಪು ಹಾಕಬಾರದೆಂದು ಕರವೇ ರಾಜ್ಯ ಉಪಾಧ್ಯಕ್ಷ ಜಿಗಣಿ ಪುನೀತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಬೆಂಗಳೂರು ದಕ್ಷಿಣ ಜಿಗಣಿ ಎಪಿಸಿ ವೃತ್ತದಲ್ಲಿ  ಶಾಸಕ ಸಂಬಾಜಿ ಪಾಟೀಲ್ ಭಾವಚಿತ್ರ ಸುಟ್ಟ ನಂತರ ಸಹಸ್ರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಹಿಂದಿನ ಎಲ್ಲ ಸರ್ಕಾರಗಳೂ ಬೆಳಗಾವಿಯ ನೆಲ ಹಾಗೂ ಕನ್ನಡಿಗರ ಭಾವನೆಗಳನ್ನು ರಕ್ಷಿಸುವಲ್ಲಿ ಯಡವಿದೆ. ಗಲಭೆಗಾ ಕಾರಣರಾದ ಪುಂಡರನ್ನು ಸದೆಬಡಿದು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕ್ಷೀಣವಾಗಿದೆ. ದಿನ ನಿತ್ಯ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದರೂ ಸರಿಯಾದ ಕ್ರಮ ವಹಿಸುತ್ತಿಲ್ಲ. ಶಾಲಾ ಬಾಲಕಿ, ಒಂಟಿ ಮಹಿಳೆಯರು ವೃದ್ಧರು ಆದಿಯಾಗಿ ಯಾರಿಗೂ ರಾಜ್ಯದಲ್ಲಿ ನೆಮ್ಮದಿಯಿಲ್ಲದಂತಾಗಿದೆ. ವಿಶೇಷ ಕಾನೂನಿನಡಿ ಬಂಧಿಸಿ ಉಗ್ರ ಶಿಕ್ಷೆ ನೀಡುವಂತಾಗಬೇಕೆಂದರು. ಹೋರಾಟಗಾರ ನಾಗಲೇಖ ಮಾತನಾಡಿದರು. ಸಹಸ್ರಾರು ವಿದ್ಯಾರ್ಥಿಗಳು ಪೋಷಕರು, ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಜಿಗಣಿ ವೃತ್ತದಲ್ಲಿ ಸ್ವಯಂ ಪ್ರೇರಿತರಾಗಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಕಬ್ಬಡಿ ಮಂಜು, ಹೆಬ್ಬಗೋಡಿ ಅಂಬರೀಶ್, ಸದ್ದಾಂ, ಸತ್ತೀಶ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement