ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನ್ನಡಿಗರನ್ನೇ ಆಯ್ಕೆ ಮಾಡಿ

Rashmi Kasaragodu
Updated On : 4 Jun 2014, 1:48 am

ರಾಮನಗರ: ರಾಜ್ಯದಿಂದ ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡುವಂತೆ ಕದಂಬ ಸೈನ್ಯ ಸಂಘಟನೆ ಆಗ್ರಹಿಸಿದೆ. ಈ ಮೊದಲು ಅನ್ಯಭಾಷಿಕರಾದ ಆಂಧ್ರಪ್ರದೇಶದ ವೆಂಕಯ್ಯ ನಾಯ್ಡು, ತಮಿಳುನಾಡಿನ ರಾಮಸ್ವಾಮಿ, ಹೇಮಮಾಲಿನಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದೀರಿ. ರಾಜ್ಯ ಹಾಗೂ ಕನ್ನಡಿಗರ ಮೇಲೆ ನಿಜವಾಗಲೂ ಅಭಿಮಾನ ಇದ್ದಿದ್ದೇ ಆದರೆ ಈ ಬಾರಿ ಕನ್ನಡಿಗರನ್ನೇ ರಾಜ್ಯ ಸಭೆಗೆ ಕಳುಹಿಸಿ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ್ ಮತ್ತು ಕಾರ್ಯದರ್ಶಿ ಚಿಕ್ಕವೆಂಕಟಪ್ಪ ಆಗ್ರಹಿಸಿದ್ದಾರೆ.
ನೊಂದ ಮಹಿಳೆ ಆತ್ಮಹತ್ಯೆ
ಸೂಲಿಬೆಲೆ: ತನಗೆ ಕಾಡುತ್ತಿದ್ದ ಅನಾರೋಗ್ಯದಿಂದ ಮನನೊಂದ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸೂಲಿಬೆಲೆ ಹೋಬಳಿಯ ಬೇಗೂರು ಗ್ರಾಮದ ರಾಧ(26) ಆತ್ಮಹತ್ಯೆ ಮಾಡಿಕೊಂಡಾಕೆ. ಬಹುದಿನಗಳಿಂದ ಕಾಡುತ್ತಿದ್ದ ಅನಾರೋಗ್ಯದಿಂದ ಮನ ನೊಂದಿದ್ದ ರಾಧ ಮನೆಯಲ್ಲಿ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷಯ ತಿಳಿದ ಕುಟುಂಬದವರು  ವಿಷ ಸೇವಿಸಿದ್ದ ರಾಧಳನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾಧ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಯಂತ್ರಣ ತಪ್ಪಿದ ಆಂಧ್ರ ಬಸ್:  ಹೊಸಕೋಟೆ ತಾಲೂಕಿನ ಎಂ.ಹೊಸಹಳ್ಳಿ ಬಳಿ ನಿಯಂತ್ರಣದ ತಪ್ಪಿದ ಆಂಧ್ರ ರಸ್ತೆ ಸಾರಿಗೆ ಸಂಸ್ಥೆಯ ಬಸ್  ಬಿದ್ದ ಘಟನೆ ಸೋಮವಾರ ನಡೆದಿದೆ. ಕೋಲಾರ ಮಾರ್ಗವಾಗಿ ಬೆಂಗಳೂರಿನತ್ತ ಬರುತ್ತಿದ್ದ ಆಂಧ್ರ ಸಾರಿಗೆ ಬಸ್ ಎಂ.ಹೊಸಹಳ್ಳಿ, ಚಿಕ್ಕನಹಳ್ಳಿ ಗೇಟ್ ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿನ ಕಲ್ಲುಗಳಿಗೆ ಗುದ್ದಿ  ಬಿತ್ತು. ಬಸ್ ಮುಂಭಾಗ ಜಖಂಗೊಂಡಿದ್ದು, ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಯಾವುದೇ ಪ್ರಾಣಾಪಾಯವಾಗಿಲ್ಲ. ವಿಷಯ ತಿಳಿದ ನಂದಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ರೇಷ್ಮೆ ಗೂಡಿನ ಬಾಕ್ಸ್‌ಗೆ ಆಗ್ರಹ
ಶಿಡ್ಲಘಟ್ಟ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ರೇಷ್ಮೆ ಗೂಡಿನ ಮಾರುಕಟ್ಟೆಗೆ ಗೂಡುಗಳನ್ನು ತುಂಬಲು ಬಾಕ್ಸ್‌ಗಳನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ರೇಷ್ಮೆ ಅಭಿವೃದ್ಧಿ ಮಂಡಳಿಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement