ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ರಿಮಿನಲ್ ಪ್ರಕರಣ: ಸೇವೆಯಿಂದ ಲೋಕಾಯುಕ್ತ ಡಿಎಸ್ಪಿ ಬಿಡುಗಡೆ

Rashmi Kasaragodu
Updated On : 4 Jun 2014, 1:49 am

ಬಾಗಲಕೋಟೆ: ಬಿಜಾಪುರ- ಬಾಗಲಕೋಟೆ ಲೋಕಾಯುಕ್ತ ಡಿಎಸ್ಪಿ ಎಸ್.ಪಿ. ತೋಳಮಟ್ಟಿ ವಿರುದ್ಧ ಕ್ರಿಮಿನಲ್ ಪ್ರಕರಣ ಇರುವ ಹಿನ್ನೆಲೆಯಲ್ಲಿ ಅವರನ್ನು ಲೋಕಾಯುಕ್ತ ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ್ ರಾವ್ ಹೇಳಿದ್ದಾರೆ.
ತೋಳಮಟ್ಟಿ ವಿರುದ್ಧ ಕ್ರಿಮಿನಲ್ ಪ್ರಕರಣ ಇರುವುದು ಮಂಗಳವಾರ ತಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಅವರನ್ನು ಲೋಕಾಯುಕ್ತ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಭ್ರಷ್ಟ ಅಧಿಕಾರಿಗಳು ಎಲ್ಲೇ ಇರಲಿ, ಎಷ್ಟೇ ಪ್ರಭಾವಿಶಾಲಿಯಾಗಿರಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾವ್ ತಿಳಿಸಿದ್ದಾರೆ.
ಈ ಹಿಂದೆ ಬಾಗಲಕೋಟೆ ಗ್ರಾಮೀಣ ಠಾಣೆಯ ಸಿಪಿಐ ಆಗಿದ್ದಾಗ ತೋಳಮಟ್ಟಿ ಅವರು ಅದಕ್ಕೂ ಹಿಂದಿನ ಸಿಪಿಐ ಅವರು ನಕಲಿ ಸಹಿ ಮಾಡಿ ಜಫು ್ತ ಪಂಚನಾಮೆಯನ್ನು ತಿದ್ದುಪಡಿ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಆರೋಪವಿದ್ದು, ಅದರ ಕುರಿತು ತನಿಖೆ ನಡೆಯುತ್ತಿದೆ. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಸಿಐಡಿ ತನಿಖೆ ನಡೆಸುವಂತೆಯೂ ಉತ್ತರ ವಲಯ ಐಜಿಪಿ ಅವರು ಪೊಲೀಸ್ ಮಹಾನಿರ್ದೇಶಕರನ್ನು ಕೋರಿದ್ದಾರೆ.


ರಾಮಮಂದಿರ ಗೋಪುರ ಧ್ವಂಸ: ಧರಣಿ
ಹುಣಸೂರು: ಪಟ್ಟಣದ 26ನೇ ವಾರ್ಡ್‌ಣನ ಒಂಟೆಪಾಳ್ಯಬೋರೆ ರಸ್ತೆಯ ಶ್ರೀ ರಾಮಮಂದಿರದ ಗೋಪುರವನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಕೆಡವಿದ್ದು, ಇದರಿಂದ ರೊಚ್ಚಿಗೆದ್ದ ನೂರಾರು ಯುವಕರು ಪಟ್ಟಣ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ರಾಮ ಮಂದಿರ ಗೋಪುರ ಕೆಡವಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಒಂಟೆಪಾಳ್ಯಬೋರೆಯ ಶ್ರೀ ರಾಮಾಂಜನೇಯ ಯುವಕ ಸಂಘದ ಅಧ್ಯಕ್ಷ ಶಿವರಾಜು ಪಟ್ಟಣ ಠಾಣೆಗೆ ದೂರು ನೀಡಿ, ಪ್ರತಿಭಟಿಸಿದರು. ಈ ವೇಳೆ ವಿಶ್ವ ಹಿಂದೂ ಪರಿಷತ್‌ಣನ ವರದರಾಜಪಿಳ್ಳೆ, ವಿ.ಎನ್. ದಾಸ್, ರಾಜೇಶ್, ಅಭಿಲಾಶ್, ಜಗದೀಶ್, ದಿನೇಶ್, ಸೋಮಶೇಖರ್ ಸೇರಿದಂತೆ 200ಕ್ಕೂ ಹೆಚ್ಚು ಯುವಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement