ಮಂಡೂರು ಕಸ ವಿರೋಧಿ ಹೋರಾಟಗಾರರು ಆನೇಕಲ್ನಲ್ಲಿ
ಆನೇಕಲ್ಲು: ಬಿಬಿಎಂಪಿಯವರು ನಗರದ ಕಸವನ್ನು ಹೊಲವಲಯಗಳಲ್ಲಿ ರಾತ್ರೋ ರಾತ್ರಿ ಎಸೆದು ಬರುವುದು ಮುಂದುವರಿಯುತ್ತಿದ್ದಂತೆ ಹೊಸಕೋಟೆ ತಾಲೂಕು ಆವಲಹಳ್ಳಿ ಹೋಬಳಿ ಮಂಡೂರು ವಾಸಿಗಳು ಕಸ ವಿಲೇ ಖಂಡಿಸಿ ಸತತವಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಗ್ರಾಮದ ಹೋರಾಟಗಾರರಾದ ಶಿವಾಜಿರಾವ್, ಸುರೇಶ್, ಕೃಷ್ಣ, ಆನಂದ ಸೇರಿದಂತೆ 21 ಜನ ಮುಖಂಡರನ್ನು ಆನೇಕಲ್ ಠಾಣೆಯಲ್ಲಿ ಇರಿಸಿಕೊಳ್ಳಲಾಗಿತ್ತು. ಆನೇಕಲ್ ವೃತ್ತ ನಿರೀಕ್ಷಕ ರಾಜೇಂದ್ರ ಅವರು ಮಾಹಿತಿ ನೀಡಿ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ
ಆನೇಕಲ್ ಸಬ್ ಡಿವಿಜನ್ನಲ್ಲಿ ಇರಿಸಿಕೊಳ್ಳುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿತ್ತು. ಗ್ರಾಮದಲ್ಲಿ ಗಲಾಟೆ ನಡೆಯುವ ಸಂಭವವಿದ್ದು ಮುನ್ನೆಚ್ಚರಿಕೆ ಅಂಗವಾಗಿ ಆನೇಕಲ್ ಠಾಣೆಗೆ ಕರೆತರಲಾಗಿತ್ತು. ಹೋರಾಟಗಾರರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ. ಮೇಲಧಿಕಾರಿಗಳ ಸೂಚನೆಯಂತೆ ಮಂಗಳವಾರ ಸಂಜೆ ಬೆಂಗಳೂರು ನಗರ ಕೃಷ್ಣರಾಜಪುರ ದಂಡಾಧಿಕಾರಿಗಳ ಕಚೇರಿಗೆ ಕರೆದೊಯ್ಯಲಾಗಿದೆ ಎಂದೂ ತಿಳಿಸಿದರು.