ಗೋವಿಂದಹಳ್ಳಿ ದೇವೇಗೌಡ ಅಂತ್ಯಕ್ರಿಯೆ
ಬೆಂಗಳೂರು: ಕನ್ನಡದ ಹಿರಿಯ ಹೋರಾಟಗಾರ ಗೋವಿಂದಹಳ್ಳಿ ದೇವೇಗೌಡ ಅವರ ಅಂತ್ಯಕ್ರಿಯೆ ಗುರುವಾರ ಹುಟ್ಟೂರಾದ ಚನ್ನಪಟ್ಟಣದ ಗೋವಿಂದಹಳ್ಳಿಯಲ್ಲಿ ನೆರವೇರಿತು.
ಮೃತರ ಪಾರ್ಥಿವ ಶರೀರವನ್ನು ಮೈಸೂರು ಬ್ಯಾಂಕ್ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು, ಕಸಾಪ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ನಿರ್ದೇಶಕ ಸಿ.ವಿ.ಶಿವಶಂಕರ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಗುರುವಾರ ಬೆಳಗ್ಗೆ 7.30ಕ್ಕೆ ನಿಧನರಾದ ಗೋವಿಂದಹಳ್ಳಿ ದೇವೇಗೌಡ ಅವರಿಗೆ 82 ವರ್ಷ ವಯಸ್ಸಾಗಿದ್ದು, ಪತ್ನಿ, ನಾಲ್ಕು ಮಕ್ಕಳನ್ನು ಅಗಲಿದ್ದಾರೆ.