ಕರವೇ ಪದಾಧಿಕಾರಿಗಳ ಪದಗ್ರಹಣ
ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕನ್ನಡಪರ ಹೋರಾಟಗಳು ಮತ್ತು ಚಳವಳಿಗಳು ಪ್ರಭಾವಿಯಾಗಿ ಆಡಳಿತಶಾಹಿ ಮೇಲೆ ಒತ್ತಡ ಹೇರುವ ಸಾಮರ್ಥ್ಯ ಗಳಿಸಬೇಕು. ಜನಪರವಾದ ಹಿತಾಸಕ್ತಿಗಳನ್ನು ಯಾವತ್ತೂ ಮರೆಯಬಾರದು ಎಂದು ಕರವೇ ರಾಜ್ಯ ಉಪಾಧ್ಯಕ್ಷ ಎಂ. ಶಿವರಾಜ್‌ಗೌಡ ಹೇಳಿದರು.
ಇಲ್ಲಿನ ಲಯನ್ಸ್ ಭವನದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ರಾಜಘಟ್ಟರವಿ, ಕಾರ್ಯಾಧ್ಯಕ್ಷರಾಗಿ ರವಿ ಮಾವಿನಕುಂಟೆ, ಉಪಾಧ್ಯಕ್ಷರಾಗಿ ರಾಜಘಟ್ಟ ಮಹೇಶ್, ಎಸ್‌ಎಲ್‌ಎನ್ ವೇಣು, ಪ್ರಧಾನ ಕಾರ್ಯದರ್ಶಿಯಾಗಿ ಹಮಾಮ್ ಪ್ರಕಾಶ್, ಕಾರ್ಯದರ್ಶಿಯಾಗಿ ಎನ್.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಹಮಾಮ್, ಖಜಾಂಚಿಯಾಗಿ ಆನಂದಕುಮಾರ್, ತೂಬಗೆರೆ ಹೋಬಳಿ ಅಧ್ಯಕ್ಷರಾಗಿ ಮುನಿಆಂಜನಪ್ಪ ಅವರನ್ನು ಘೋಷಣೆ ಮಾಡಲಾಯಿತು.