ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಮುದ್ವತಿ-ಅರ್ಕಾವತಿ ಪುನಶ್ಚೇತನ

Rashmi Kasaragodu
Updated On : 7 Jun 2014, 1:26 am

ರಾಮನಗರ: ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗಳ ಪ್ರಮುಖ ನೀರಿನ ಮೂಲಗಳಾಗಿದ್ದ ಕುಮುದ್ವತಿ ಹಾಗೂ ಅರ್ಕಾವತಿ ನದಿಗಳ ಪುನಶ್ಚೇತನಕ್ಕೆ ಸರ್ಕಾರವು ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದು, ಆರ್ಟ್ ಆಫ್ ಲೀವಿಂಗ್ ಹಾಗೂ ಬಾಷ್ ಕಂಪೆನಿಯೂ ಈ ಕಾರ್ಯಕ್ಕೆ ಕೈಜೋಡಿಸಿವೆ.  
ಕುಮುದ್ವತಿ ನದಿ ಪುನಶ್ಚೇತನಕ್ಕೆ ಬಾಷ್ ಕಂಪನಿ ರು.15 ಲಕ್ಷ ಒದಗಿಸಿದ್ದು, ಆರ್ಟ್ ಆಫ್ ಲೀವಿಂಗ್ ಸ್ವಯಂ ಸೇವಕರ ಸಹಾಯದಿಂದ ನದಿ  ಮೂಲ ಸ್ಥಳದಲ್ಲಿ ಇಂಗು ಗುಂಡಿ, ನೀರು ತಡೆಗಟ್ಟುವಿಕೆ ಕ್ರಮಗಳನ್ನು ಕೈಗೊಂಡು ಅಂತರ್ಜಲ ಹೆಚ್ಚಿಸುವ ಕೆಲಸ ಕೈಗೊಂಡಿದೆ.  ಕೈಗೊಂಡಿರುವ ಕಾಮಗಾರಿಗಳನ್ನು ಜೂ.7 ಜಿಲ್ಲಾಡಳಿತಕ್ಕೆ ವಹಿಸುವ ಕಾರ್ಯಕ್ರಮವು ಮಾಗಡಿಯ ಸೋಲೂರು ಹೋಬಳಿಯ ಬಾಣವಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಜಮಾದಾರ್, ಜಿಪಂ ಸಿಇಒ ವೆಂಕಟೇಶ್, ಪರಿಸರ ತಜ್ಞ ಯಲ್ಲಪ್ಪರೆಡ್ಡಿ, ಆರ್ಟ್ ಆಫ್ ಲೀವಿಂಗ್ ಹಾಗೂ ಬಾಷ್ ಸಂಸ್ಥೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement