ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೆರೆ ಶುದ್ಧೀಕರಿಸಿ ಕೃಷಿ ಬಳಕೆಗೆ ಕ್ರಮ

Rashmi Kasaragodu
Updated On : 7 Jun 2014, 1:26 am

ರಾಮನಗರ: ಒಡಲಲ್ಲಿ ವಿಷ ತುಂಬಿಕೊಂಡಿರುವ ಬೈರಮಂಗಲ ಕೆರೆಯ ನೀರನ್ನು ಶುದ್ಧೀಕರಿಸಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮತಿ ರಚನೆಯಾಗಿದೆ ಎಂದು ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.  ಬಿಡದಿ ಬಳಿಯ ಬೈರಮಂಗಲ ಕೆರೆಗೆ ಬೆಂಗಳೂರು ನಗರದಿಂದ ಸುಮಾರು 800 ಎಂಎಲ್‌ಡಿಯಷ್ಟು ಕಲುಷಿತ ನೀರು ಹರಿದು ಬರುತ್ತಿದೆ. ಇದರಿಂದಾಗಿ ಬೈರಮಂಗಲ ಕೆರೆಯ ಸುತ್ತ-ಮುತ್ತಲಿನ ಪರಿಸರ ಮಲಿನಗೊಂಡಿರುವ ಬಗ್ಗೆ ಲೋಕ್ ಅದಾಲತ್‌ನಲ್ಲಿ ಪದೇ ಪದೇ ಚರ್ಚೆಗಳಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನೀರನ್ನು ಶುದ್ಧೀಕರಿಸಲು ಬೆಂಗಳೂರು ನೀರು ಸರಬರಾಜು ಮಂಡಳಿ ಹಾಗೂ ಸಂಬಂಧಿಸಿದ ಇಲಾಖೆಗಳು ಘಟಕ ಸ್ಥಾಪಿಸಲಿವೆ. ಶುದ್ದೀಕರಿಸಿದ ನೀರನ್ನು ಗುರುತ್ವಾಕರ್ಷಣೆ ಮೂಲಕ ಸುಮಾರು 32 ಕೆರೆಗಳಿಗೆ ಹರಿಸುವ ಮೂಲಕ ಕೃಷಿ  ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಆ ನೀರನ್ನು ಬಳಸಿಕೊಳ್ಳಲಾಗುವುದು ಎಂದರು. ಪ್ರತಿ ದಿನ ಸುಮಾರು 60 ರಿಂದ 70 ಲೀಟರ್ ನೀರು ಹೀರಿಕೊಳ್ಳುವ ನೀಲಗಿರಿ ಮರಗಳನ್ನು ಕತ್ತರಿಸಿ ಆ ಜಾಗದಲ್ಲಿ ಹೆಬ್ಬೇವು, ಸೀಬೇವು ಇನ್ನಿತರೆ ಮರಗಳನ್ನು ಬೆಳೆಸಲಾಗುವುದು. ಮಾಗಡಿಯ ಲಕ್ಕನಹಳ್ಳಿ ಮತ್ತು ಮೋಟಗಾನಹಳ್ಳಿಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದಿರುವ ಮರಗಳನ್ನು ತೆರವುಗೊಳಿಸಲಾಗುವುದು ಎಂದರು.  
ತಿಪ್ಪಗೊಂಡನಹಳ್ಳಿ ಜಲಾಶಯದ ಕ್ಯಾಚ್‌ಮೆಂಟ್ ಏರಿಯಾ ಸುತ್ತ-ಮುತ್ತ ಬಡಾವಣೆ ನಿರ್ಮಾಣ, ಕಾರ್ಖಾನೆ ಸ್ಥಾಪನೆಯನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಮಲಿನವಾಗದಂತೆ ಎಚ್ಚರವಹಿಸುವ ಸಲುವಾಗಿ ಸರ್ಕಾರ ಈ ನಿಷೇಧ ಹೇರಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement