ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಲಿತ ಸಂಘರ್ಷ ಸೇನೆಗೆ ಆಯ್ಕೆ

Rashmi Kasaragodu
Updated On : 7 Jun 2014, 1:27 am

ದೇವನಹಳ್ಳಿ: ತಾಲೂಕು ದಲಿತ ಸಂಘರ್ಷ ಸೇನೆ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಣದಲ್ಲಿ ನಡೆಯಿತು. ಕುಂದಾಣ ಎಂ.ನರಸಿಂಹ- ಅಧ್ಯಕ್ಷರು, ಪೋಲನಹಳ್ಳಿ ನಾಗರಾಜ- ಪ್ರಧಾನ ಕಾರ್ಯದರ್ಶಿ, ವಿಜಯಪುರ ಕೆ.ನಾರಾಯಣಸ್ವಾಮಿ - ಕಾರ್ಯಾಧ್ಯಕ್ಷರು, ಹಂದರಹಳ್ಳಿ ಬಾಬು ಮತ್ತು ಕೋರಮಂಗಲ ವೆಂಕಟೇಶ್- ಉಪಾಧ್ಯಕ್ಷರುಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಪ್ರಕಟಣೆ ತಿಳಿಸಿದೆ.
ಕಿರುಕುಳ; ಪ್ರೇಮಿ ನೇಣಿಗೆ ಶರಣು
ರಾಮನಗರ: ಪೋಷಕರು ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೆ ಮನನೊಂದ ಪ್ರೇಮಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಬಸವನಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.  ಬಸವನಪುರ ಗ್ರಾಮದ ಗಿರೀಶ್(20) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕಳೆದೆರೆಡು ವರ್ಷದಿಂದ ಇದೇ ಗ್ರಾಮದ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದ  ವಿಷಯ ಪೋಷಕರಿಗೆ ತಿಳಿದು, ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಇವರಿಬ್ಬರ ಪ್ರೀತಿ ಮುಂದುವರಿದಿತ್ತು. ಇದರಿಂದ ಕೋಪಗೊಂಡ ಹುಡುಗಿಯ ಪೋಷಕರು ಗಿರೀಶ್  ಮೇಲೆ ಹಲ್ಲೆ ನಡೆಸಿ, ಮತ್ತೊಮ್ಮೆ ಹುಡುಗಿ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರು. ಈ ಹಲ್ಲೆ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಬಳಿಕ ರಾಜಿ ನಡೆದಿತ್ತು. ಕೆಲ ದಿನಗಳ ಕಾಲ ಸುಮ್ಮನಿದ್ದ ಪ್ರೇಮಿಗಳು ಪುನಃ ಫೋನ್‌ನಲ್ಲಿ ಸಂಭಾಷಣೆ ಹಾಗೂ ಪರಸ್ಪರ ಸಂದೇಶ ರವಾನಿಸುವುದನ್ನು ಮುಂದುವರಿಸಿದ್ದರು. ಇದರಿಂದ ಕೋಪಗೊಂಡ ಹುಡುಗಿಯ ಪೋಷಕರು ಶುಕ್ರವಾರ ರಾತ್ರಿ ಮತ್ತೆ ಗಿರೀಶನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ  ಹಿಂದೆಯೇ ಎಚ್ಚರಿಕೆ ನೀಡಿದಾಗ್ಯೂ ಹಳೇ ಚಾಳಿ ಮುಂದುವರಿಸಿದ್ದೀಯಾ, ಮತ್ತೊಮ್ಮೆ ಹುಡುಗಿ ತಂಟೆಗೆ ಬಂದರೆ ಕಥೆ ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಹೆದರಿದ ಗಿರೀಶ ಶನಿವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ, ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement