ನೇಕಾರ ಸಹಕಾರ ಸಂಘಕ್ಕೆ ಆಯ್ಕೆ
ದೊಡ್ಡಬಳ್ಳಾಪುರ: ಬೆಂಗಳೂರು ಜಿಲ್ಲಾ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಮಹಾ ಮಂಡಳ ನಿಯಮಿತ ಸಂಘಕ್ಕೆ 5 ವರ್ಷಗಳ ಅವಧಿಗೆ ಸಂಘದ ಪದಾಧಿಕಾರಿಗಳ ಚುನಾವಣೆ ನಡೆಯಿತು. ಪದಾಧಿಕಾರಿಗಳಾಗಿ ದೊಡ್ಡಬಳ್ಳಾಪುರದ ಕೆ.ಪಿ.ವಾಸುದೇವ್, ಡಿ.ಪಿ.ಸುಬ್ರಮಣಿ, ಡಿ.ಎನ್.ಗಂಗಾಧರ್, ಡಿ.ಪ್ರಭುದೇವಯ್ಯ, ಕೆ.ಸಿ.ಗೌರಮ್ಮ, ಎನ್.ಸುಮಿತ್ರ ಮತ್ತಿತರರು ಆಯ್ಕೆಯಾಗಿದ್ದಾರೆ.