ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎ.ಜಿ ಕಚೇರಿಯ ಕ್ರಮ ಸಾಧುವಲ್ಲ

Rashmi Kasaragodu
Updated On : 8 Jun 2014, 2:30 am

ಚನ್ನಪಟ್ಟಣ: 2013ರ ಬಳಿಕ ನಿವೃತ್ತರಾದ ದಿನಗೂಲಿ ನೌಕರರ ಪಿಂಚಣಿಯನ್ನು ಜಿ.ಪಂ ಮಟ್ಟದಲ್ಲಿ ಬಗೆಹರಿಸಿ ಕೊಳ್ಳುವಂತೆ ಸೂಚಿಸಿ ಕಡತವನ್ನು ಹಿಂದಿರುಗಿಸಿರುವ ಎ.ಜಿ ಕಚೇರಿಯ ಕ್ರಮ ಸಾಧುವಲ್ಲ ಎಂದು ದಿನಗೂಲಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ಅಬ್ಬೂರು ರಾಜಮುಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1989 ರಲ್ಲಿ 10 ವರ್ಷಗಳ ಕಾಲ ಜಿ.ಪಂ, ಲೋಕೋಪಯೋಗಿ, ರೇಷ್ಮೆ, ಕೃಷಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಕಾಯಂ ಮಾಡಿಕೊಳ್ಳುವಂತೆ ನ್ಯಾಯಾಲಯ  ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 63 ಸಾವಿರ ನೌಕರರನ್ನು ಖಾಯಂ ಮಾಡಿಕೊಳ್ಳಲಾಗಿದೆ. ಇವರಲ್ಲಿ ಅರ್ಧದಷ್ಟು ನೌಕರರು ನಿವೃತ್ತರಾಗಿದ್ದಾರೆ. 2013 ರನಂತರ ನಿವೃತ್ತರಾಗುವ ನೌಕರರ ಪಿಂಚಣಿಯನ್ನು ಜಿ.ಪಂ ಮಟ್ಟದಲ್ಲಿ ಬಗೆಹರಿಸಿಕೊಳ್ಳಿ ಎಂದು ಸರ್ಕಾರ ಹೊಡಿಸಿರುವ ಆದೇಶ ಸಾಕಷ್ಟು ಗೊಂದಲ ಮೂಡಿಸಿದೆ ಎಂದು ತಿಳಿಸಿದ್ದಾರೆ. ಕೆಲ ನೌಕರರನ್ನು ಜಿ.ಪಂ ನೇಮಕ ಮಾಡಿಕೊಂಡಿದ್ದರೆ ಮತ್ತೆ ಕೆಲ ನೌಕರರನ್ನು ನೇರವಾಗಿ ಸಚಿವಾಲಯ ನೇಮಕ ಮಾಡಿಕೊಂಡಿದೆ. ಜಿ.ಪಂ ನಲ್ಲಿ ಪಿಂಚಣಿ ಬಗೆಹರಿಸಿಕೊಳ್ಳಿ ಎಂದಾದಲ್ಲಿ ಈ ಎರಡೂ ರೀತಿ ನೇಮಕ ಗೊಂಡಿರುವ ನೌಕರರ ಪಿಂಚಣಿ ನಿಗದಿಗೆ ಸಮಸ್ಯೆಯಾಗುತ್ತದೆ. ಕೂಡಲೇ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆದು ದಿನಗೂಲಿ ನೌಕರರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement