ದತ್ತಪೀಠದ ವಿರಜಾನಂದ ಸರಸ್ವತಿ ಸ್ವಾಮೀಜಿ ದೈವಾಧೀನ
ಕನಕಪುರ: ಕನಕಪುರ ತಾಲೂಕು ದೊಡ್ಡಮುದವಾಡಿ ಗ್ರಾಮದ ದತ್ತಪೀಠದ ವಿರಜಾನಂದ ಸರಸ್ವತಿ ಸ್ವಾಮೀಜಿ ತೀವ್ರ
ಅನಾರೋಗ್ಯದಿಂದ ದೈವಾದೀನರಾದರು. ಶ್ರೀಗಳಿಗೆ 68 ವರ್ಷ ವಯಸ್ಸಾಗಿತ್ತು.
ಕನಕಪುರ ತಾಲೂಕಿನ ದೊಡ್ಡಮುದವಾಡಿ ಗ್ರಾಮದ ದತ್ತಪೀಠವು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು ವಿರಜಾನಂದ ಸರಸ್ವತಿ ಸ್ವಾಮೀಜಿ ಪೀಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಅಧ್ಯಾತ್ಮಿಕ ಉಪನ್ಯಾಸಗಳನ್ನು ನೀಡುತ್ತಾ ಹೆಸರಾಗಿದ್ದರು. ಶ್ರೀಗಳ ಪಾರ್ಥಿವ ಶರೀರವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.