ಕಂಪ್ಯೂಟರ್ ತರಬೇತಿ
ಬೆಂಗಳೂರು: ಆರ್ಥಿಕವಾಗಿ ಹಿಂದುಳಿದವರಿಗೆ ಡಾ.ರೆಡ್ಡೀಸ್ ಪ್ರತಿಷ್ಠಾನ ಆಟೋಮೊಬೈಲ್ ದುರಸ್ತಿ, ಬೇಸಿಕ್ ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ ಹಾಗೂ ಸಂದರ್ಶನ ಕೌಶಲದ ತರಬೇತಿ ನೀಡಲಾಗುತ್ತದೆ. ಪಿಯುಸಿ, ಡಿಗ್ರಿ, ಐಟಿಐ ಪೂರ್ಣಗೊಳಿಸಿದವರು ಜೂ.10ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ: ಮೊ.9481915991.
ಅತ್ಯಾಚಾರ: ಮೂವರು ಶಂಕಿತರು ವಶಕ್ಕೆ
ಬೆಂಗಳೂರು: ಸಾಫ್ಟ್ವೇರ್ ಕಂಪನಿ ಉದ್ಯೋಗಿ ಅತ್ಯಾಚಾರ ಪ್ರಕರಣ ತನಿಕೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪಿ.ಜಿಯೊಂದಕ್ಕೆ ನುಗ್ಗಿ ಅಲ್ಲಿನ ಯುವತಿ ಸರ ಕಳವು ಮಾಡಿದ್ದ ಆರೋಪಿ ಶಿವಶಂಕರ ಹಾಗೂ ಮತ್ತಿಬ್ಬರು ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಯುವತಿಯಿಂದ ಕಲೆಹಾಕಿರುವ ಮಾಹಿತಿ ಆಧರಿಸಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.