ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚನ್ನಪಟ್ಟಣದಲ್ಲಿ ಚಿರತೆ ಚೀತ್ಕಾರ!

Rashmi Kasaragodu
Updated On : 10 Jun 2014, 1:27 am

ಸು.ನಾ.ನಂದಕುಮಾರ್
ಚನ್ನಪಟ್ಟಣ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲೀಗ ಚಿರತೆ ಭಯ ಕಾಡುತ್ತಿದ್ದು, 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಜನತೆಯನ್ನು ಭಯಭೀತಗೊಳಿಸಿದೆ.
ಕಣ್ವ ನದಿ ಅಂಚಿನ ಗ್ರಾಮಗಳು ಹಾಗೂ ಅರಣ್ಯ ಪ್ರದೇಶದ ತಪ್ಪಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಚಿರತೆ ರೈತರ ಕುರಿ, ಹಸು, ಎಮ್ಮೆ ಹಾಗೂ ನಾಯಿಗಳನ್ನು ತಿಂದು ಹಾಕಿರುವ ಘಟನೆಗಳು ಸಾಕಷ್ಟಿದ್ದು, ಕೆಲ ಗ್ರಾಮಗಳಲ್ಲಿ ಸಂಜೆ ವೇಳೆ ಮನೆಯಿಂದ ಹೊರ ಬರದೆ ಜನತೆ ಭಯದ ನೆರಳಲ್ಲಿ ಬದುಕುವಂತಾಗಿದೆ. ತಾಲೂಕಿನ ಕಾಡಂಕನಹಳ್ಳಿ, ಇಗ್ಗಲೂರು, ನೇರಳೂರು ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ, ಚಕ್ಕೆರೆ, ಚಕ್ಕಲೂರು, ಕೃಷ್ಣಾಪುರ, ಕೂರಣಗೆರೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಚಿರತೆ ಕಾಣಿಸಿ ಕೊಂಡಿದೆ. ಕಾಡಂಕನಹಳ್ಳಿ ಗ್ರಾಮದ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬೀಳುವುದರೊಂದಿಗೆ ಈಭಾಗದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ,ತಾಲೂಕಿನ ಇತರ ಭಾಗದಲ್ಲಿ ಚಿರತೆ ಹಾವಳಿ ಮುಂದುವರೆದಿದ್ದ ಜನತೆ ಕಂಗಾಲಾಗಿದ್ದರೆ.



ಪ್ರತ್ಯಕ್ಷವಾದ ಚಿರತೆ
ತಾಲೂಕಿನ ಕೆಲವೆಡೆ ಚಿರತೆಗಳು ಮಾನವನ ಮೇಲೆ ದಾಳಿ ಮಾಡಲು ಯತ್ನಿಸಿರುವ ಬಗ್ಗೆ ವರದಿಯಾಗಿದ್ದು, ಕೂಡ್ಲೂರು ಸಮೀಪದ ಕಣ್ವ ನದಿಯಲ್ಲಿ ಮರಳು ತುಂಬುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಲು ಮುಂದಾಗಿತ್ತು ಎಂದು ಹೇಳಲಾಗಿದೆ ಬಂದಿದೆ. ಅಂತೆಯೇ ಹಾರೋಕೊಪ್ಪ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಇವರ ಮೇಲೆ ಚಿರತೆ ಇವರ ಮೇಲೆ ಜಿಗಿಯಲು ಯತ್ನಿಸಿದ್ದು ಕ್ಷಣಾರ್ಧದಲ್ಲಿ ಇವರು ಚಿರತೆ ದಾಳಿ ಯಿಂದ ಪಾರಾಗಿದ್ದಾರೆ.
ಭಯದಿಂದ ನಲುಗುವಂತಾಗಿದೆ
ಚಿರತೆ ಜನರಿಗೆ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ ರಾತ್ರಿ ವೇಳೆ ತಮ್ಮ ಜಮೀನಿನಲ್ಲಿ ನೀರು ಕಟ್ಟಲು ತೆರಳುವ ರೈತರು ಭಯದಿಂದ ನಲುಗುವಂತಾಗಿದೆ. ಗ್ರಾಮೀಣ ಭಾಗದ ಜನತೆ ನಿತ್ಯ ಆತಂಕದಲ್ಲಿ ಕಳೆಯುತ್ತಿದ್ದು, ಅರಣ್ಯ ಇಲಾಖೆ ಇತ್ತ ಗಮನ ಹರಿಸಿ ಚಿರತೆ ಭೀತಿಯಿಂದ ಜನತೆಯನ್ನು ಮುಕ್ತ ಗೊಳಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement