ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಮೇಶ್ ಬಮೂಲ್ ಅಧ್ಯಕ್ಷ

Rashmi Kasaragodu
Updated On : 10 Jun 2014, 1:27 am

ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ(ಬಮೂಲ್ ) ಅಧ್ಯಕ್ಷರಾಗಿ ಆರ್.ಕೆ.ರಮೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಒಕ್ಕೂಟದ ನಿರ್ದೇಶಕರ ಆಯ್ಕೆಯಾಗಿ 15 ದಿನಗಳೇ ಕಳೆದಿದ್ದರೂ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಕಾಂಗ್ರೆಸ್ ಮತ್ತು ಬಂಡಾಯ ಜೆಡಿಎಸ್ ನಿರ್ದೇಶಕರ ನಡುವೆ ಪೈಪೋಟಿ ಉಂಟಾಗಿ ಚುನಾವಣೆ ನಡೆಯುವ ಸಾಧ್ಯತೆ ಇತ್ತು. ಅಂತಿಮ ಹಂತದಲ್ಲಿ ಎಲ್ಲಾ ಪಕ್ಷಗಳಿಗೂ ಅಧಿಕಾರ ಸಿಗುವಂತೆ ಹಂಚಿಕೆ ಸೂತ್ರ ಹೆಣೆದು ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹೀಗಾಗಿ ರಮೇಶ್ ಅಧ್ಯಕ್ಷರಾಗಿ ಆಯ್ಕೆಯಾದರು.ವಿಶೇಷವೆಂದರೆ, ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರಲ್ಲಿ ಯಾರೊಬ್ಬರೂ ಅಧ್ಯಕ್ಷರಾಗದೆ ಸರ್ಕಾರದಿಂದ ನಾಮನಿರ್ದೇಶಿತರಾದ ಸದಸ್ಯ ರಮೇಶ್ ಆಯ್ಕೆಯಾದರು. ಅಂದರೆ, ಆನೇಕಲ್ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘ ಚುನಾವಣೆಯಲ್ಲಿ ರಮೇಶ್ ಸೋಲು ಅನುಭವಿಸಿದ್ದರು. ನಂತರ ಅವರನ್ನು ಸರ್ಕಾರ ಬಮುಲ್‌ಗೆ ನಾಮ ನಿರ್ದೇಶನ ಮಾಡಿತ್ತು. ಅವರನ್ನೇ ಅಧ್ಯಕ್ಷ ಸ್ಥಾನಕ್ಕೂ ಬಿಂಬಿಸಲಾಗಿತ್ತು. ಒಟ್ಟು 12 ಮಂದಿ ನಿರ್ದೇಶಕರ ಬಲ ಇರುವ ಒಕ್ಕೂಟದಲ್ಲಿ ಕಾಂಗ್ರೆಸ್-4, ಬಿಜೆಪಿ-1, ಜೆಡಿಎಸ್-1 ಹಾಗೂ ಬಂಡಾಯ ಜೆಡಿಎಸ್-3 ಹಾಗೂ ಪಕ್ಷೇತರ ಒಬ್ಬರು ನಿರ್ದೇಶಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement